ಜೀವಶಾಸ್ತ್ರ ಒಲಿಂಪಿಯಾಡ್ ಪರೀಕ್ಷೆ: ಸಿಎಫ್ಎಎಲ್‌ನ ಶ್ರೇಯಸ್ ಪೈ ಟಾಪರ್

Update: 2019-06-22 14:53 GMT

ಮಂಗಳೂರು, ಜೂ.22: ಜೀವಶಾಸ್ತ್ರ ಒಲಿಂಪಿಯಾಡ್ ನಲ್ಲಿ ಸಿಎಫ್ಎಎಲ್‌ ಸಂಸ್ಥೆಯ ವಿದ್ಯಾರ್ಥಿ ಶ್ರೇಯಸ್ ದೇಶಕ್ಕೆ ಟಾಪರ್ ಆಗುವ ಮೂಲಕ ತಮ್ಮ ಸಂಸ್ಥೆಗೆ ಮಾತ್ರವಲ್ಲ ಮಂಗಳೂರು ಸೇರಿದಂತೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಸಿಎಫ್ಎಎಲ್‌ ಸಂಸ್ಥೆಯ ಮುಖ್ಯಸ್ಥೆ ಸೆವೆರಿನ್ ರೊಜಾರಿಯೋ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿಎಫ್ಎಎಲ್‌ ನ ಹಲವು ಮಂದಿ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸಾಧನೆ ತೋರಿದ್ದಾರೆ. ಚೆನ್ನೈ ಮೆಥಮೆಟಿಕಲ್ ಇನ್‌ಸ್ಟಿಟ್ಯೂಟ್ (ಸಿಎಂಐ) ಪ್ರವೇಶ ಪರೀಕ್ಷೆಯಲ್ಲಿ ಭಾರತದ ಮೊದಲ ಹತ್ತು ಸ್ಥಾನಗಳಲ್ಲಿ ಸಿಎಫ್ಎಎಲ್‌ ನ ಸಮರ್ಥ್ ಎಂ.ಭಟ್ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.

ಸಿಎಂಐ ಪ್ರವೇಶ ಪರೀಕ್ಷೆಯಲ್ಲಿ ಅಗ್ರ ಹತ್ತು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಅನೀಶ್ ಹೆಬ್ಬಾರ್ ಎರಡು ವರ್ಷಗಳ ಕಾಲ ಗಣಿತ ಒಲಿಂಪಿಯಾಡ್ ಶಿಬಿರದಲ್ಲಿ ಭಾಗವಹಿಸಿದ್ದರು. ಸಿಎಮ್‌ಐನಲ್ಲಿ ಒಂದು ಸ್ಥಾನವನ್ನು ಹೊರತುಪಡಿಸಿ, ಬಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ವಂತ ಸ್ಥಾನ ಪಡೆಡಿದ್ದಾರೆ ಎಂದವರು ತಿಳಿಸಿದರು.

ಬೆಂಗಳೂರಿನ ಐಎಎಸ್‌ಇಯಲ್ಲಿ ಸಂಸ್ಥೆಯ ವಿದ್ಯಾರ್ಥಿ ಅಂಕುಶ್ ಮೊಗೇರ್ ಸ್ಥಾನ ಪಡೆದಿದ್ದಾರೆ. ಕೆವಿಪಿವೈ ವಿದ್ಯಾರ್ಥಿ ವೇತನಕ್ಕೂ ಅರ್ಹತೆ ಗಳಿಸಿದ್ದಾರೆ. ವಿಷ್ಣು ಭಾರದ್ವಾಜ್ ಏಮ್ಸ್‌ನಲ್ಲಿ 426, ಜಿಪ್ಮರ್‌ನಲ್ಲಿ ಎಐರ್ 220 ಮತ್ತು ನೀಟ್‌ನಲ್ಲಿ ಎಐಆರ್ 1859ನ್ನು ಪಡೆದಿದ್ದಾರೆ. ಸಿಎಫ್ಎಎಲ್‌ ನಿಂದ ಸೂರಜ್ ಸಾಮಗ ಜೆಇಇ ಅಡ್ವಾನ್ಸ್‌ಡ್ 2019 ಟಾಪರ್ ಆಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News