ಜೂ.25-26: ಖಜಾನೆ ‘2’ ಅಧಿಕಾರಿಗಳಿಗೆ ತರಬೇತಿ

Update: 2019-06-22 14:56 GMT

ಮಂಗಳೂರು, ಜೂ.22: ಖಜಾನೆ 2ರ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಜಿಪಂ ಹಾಗೂ ತಾಪಂ ಅಧೀನದ ಎಲ್ಲ ಅಧಿಕಾರಿಗಳಿಗೆ (ಡಿಡಿಒ) ಜಿಲ್ಲಾ ಖಜಾನೆ ಸಭಾಂಗಣದಲ್ಲಿ ಜೂ.25 ಹಾಗೂ 26ರಂದು ತರಬೇತಿ ಏರ್ಪಡಿಸಲಾಗಿದೆ.

ರಾಜ್ಯ ಸರಕಾರದ ಇಲಾಖೆಗಳ ಎಲ್ಲ ಕಚೇರಿ ಮುಖ್ಯಸ್ಥರು ಆಯಾ ತಿಂಗಳು ಖಜಾನೆಯೊಂದಿಗೆ ವ್ಯವಹರಿಸಿದ ಬಗ್ಗೆ ಖಜಾನೆ 1ರ 62 ‘ಬಿ’ಯನ್ನು ಖಜಾನೆಯಿಂದ ಪಡೆದು ಪರಿಶೀಲಿಸಿ ತಾಳೆಯಾಗಿರುವ ಬಗ್ಗೆ ದೃಢೀಕರಿಸಿ ಪ್ರತೀ ತಿಂಗಳ 5ನೇ ತಾರೀಕಿನೊಳಗೆ ಸಲ್ಲಿಸಬೇಕು.

ಜೂ.25ರಂದು ಬೆಳಗ್ಗೆ 10:30ಕ್ಕೆ ಜಿಪಂ ಹಣ ಸೆಳೆಯುವ ಅಧಿಕಾರಿಗಳಿಗೆ (ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಹೊರತುಪಡಿಸಿ), ಮಧ್ಯಾಹ್ನ 2:30ಕ್ಕೆ ಜಿಪಂ ಹಣ ಸೆಳೆಯುವ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ, ಜೂ.26ರಂದು ಬೆಳಗ್ಗೆ 10:30ಕ್ಕೆ ತಾಪಂ ಹಣ ಸೆಳೆಯುವ ಅಧಿಕಾರಿಗಳಿಗೆ (ಶಿಕ್ಷಣ ಇಲಾಖೆ ಹೊರತುಪಡಿಸಿ), ಮಧ್ಯಾಹ್ನ 2:30ಕ್ಕೆ ತಾಪಂ ಹಣ ಸೆಳೆಯುವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತರಬೇತಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಖಜಾನಾಧಿಕಾರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News