ಮಂಗಳೂರು: ಪಾದುವ ಕಾಲೇಜಿನಲ್ಲಿ ಪ್ರಾರಂಭೋತ್ಸವ

Update: 2019-06-22 15:21 GMT

ಮಂಗಳೂರು: ಪ್ರಸಕ್ತ ವರ್ಷದ (2019-20) ಕಾಲೇಜಿನ ಪ್ರಾರಂಭೋತ್ಸವ ಪಾದುವ ಕಾಲೇಜಿನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಂಟ್ವಾಳ ಇದರ ಆಂಗ್ಲ ವಿಭಾಗದ ಮುಖ್ಯಸ್ಥರಾದ  ಪ್ರೊ. ನಂದಕಿಶೋರ್ ಮಾತನಾಡಿ ಶಿಕ್ಷಣ ಕೌಶಲದಿಂದ ಕೂಡಿರಬೇಕು. ಸಾಧ್ಯವಾದಷ್ಟು ಕಲಿಕೆಯನ್ನು ಕಲಿತು, ವರ್ಷಾಂತ್ಯದಲ್ಲಿ ಜ್ಞಾನ ಭಂಡಾರವನ್ನು ತುಂಬಿಸಿಕೊಂಡು ಜೀವನವನ್ನು ಎದುರಿಸಲು ಸನ್ನಧ್ಧರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಾದುವ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ.ಫಾ. ವಿನ್ಸೆಂಟ್ ಮೊಂತೇರೊರವರು ವಿಧ್ಯಾರ್ಥಿಗಳಿಗೆ ನಮ್ಮೊಳಗಿದ್ದ ಪ್ರತಿಭೆಗಳನ್ನು ಸಂಪೂರ್ಣವಾಗಿ ಹೊರಹಾಕಲು, ಹಾಗೂ ಹೊಸತಾದ ವಿಷಯಗಳನ್ನು ಕಲಿತು, ನಮ್ಮ ಕಲಿಕಾ ಶಕ್ತಿಯನ್ನು ವೃದ್ದಿಸಿ ನಮ್ಮ ಗುರಿಯತ್ತ ಸಾಗಲು ಈ ಶೈಕ್ಷಣಿಕ ವರ್ಷ ಸಹಕಾರಿಯಾಗಲಿ ಎಂದು ಶುಭಕೋರಿದರು.

ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಆಲ್ವಿನ್ ಸೆರಾವೊರವರು ಮಾತನಾಡಿ ಜೀವನದಲ್ಲಿ ಯಶಸ್ವಿಯಾಗಲು ಸೋಮಾರಿತನವನ್ನು ಹೋಗಲಾಡಿಸಿ, ಶ್ರಮವನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಹಾಗೆಯೇ ನಮ್ಮ ಜೀವನದಲ್ಲಿ ಗುರಿ ಬಹಳ ಮುಖ್ಯ ಹಾಗೂ ಅದನ್ನು ಸಾಧಿಸಲು ಸಮಯಚಿತ್ತವಾದ ಯೋಜನೆಯು ಅವಶ್ಯಕ ಎಂಬ ಕಿವಿಮಾತನ್ನು ವಿದ್ಯಾರ್ಥಿಗಳಿಗೆ ನುಡಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಅಂಕಗಳನ್ನು ಪಡೆದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಉಪಪ್ರಾಂಶುಪಾಲರಾದ ರೋಶನ್ ಸಾಂತುಮಾಯೊರ್ ಎಲ್ಲಾರನ್ನು ಸ್ವಾಗತಗೈದರೆ, ಕಾಲೇಜಿನ ಉಪನ್ಯಾಸಕ ರಾಹುಲ್ ಧನ್ಯವಾದಗೈದರು. ಕಾಲೇಜಿನ ವಿಧ್ಯಾರ್ಥಿ ಸಂಘದ ನಿಕಟಪೂರ್ವ ಅದ್ಯಕ್ಷರಾದ ರುದ್ರೇಶ್ ಹಾಗೂ ಕಾರ್ಯದರ್ಶಿಯಾದ ಕು. ಸಹಾನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಕು. ರೇಶ್ಮಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ಪ್ರೊ. ನಂದಕಿಶೊರ್ ಇವರಿಂದ ವಿದ್ಯಾರ್ಥಿಗಳಿಗೆ ಉಪನ್ಯಾಸ ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News