ಇಂದ್ರಾಳಿ: ದ್ವಿಚಕ್ರ ವಾಹನದಲ್ಲಿ ಬೆಂಕಿ
Update: 2019-06-22 21:43 IST
ಉಡುಪಿ, ಜೂ.22: ಬೆಂಕಿ ಅಕಸ್ಮಿಕದಿಂದ ಚಲಿಸುತ್ತಿದ್ದ ದ್ವಿಚಕ್ರ ವಾಹನ ವೊಂದು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಜೂ.22ರಂದು ಸಂಜೆ ವೇಳೆ ಇಂದ್ರಾಳಿ ಸಮೀಪ ನಡೆದಿದೆ.
ಮಣಿಪಾಲದ ಶಂಕರ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಆ್ಯಕ್ಟಿವ್ ಹೊಂಡಾ ದ್ವಿಚಕ್ರ ವಾಹನದಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ರಸ್ತೆ ಬದಿ ನಿಲ್ಲಿಸಿದ ಶಂಕರ್ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿ ಇಡೀ ವಾಹನವನ್ನು ವ್ಯಾಪಿಸಿತು. ಇದರಿಂದ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಈವೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.