ಅಂದರ್ ಬಾಹರ್: ಆರು ಮಂದಿ ಸೆರೆ
Update: 2019-06-22 21:44 IST
ಬೈಂದೂರು, ಜೂ.22: ಯಡ್ತರೆ ಗ್ರಾಮದ ಆಭರಣ ಶೂರೂಮ್ ಬಳಿ ಜೂ.22ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ಯೋಜನಾ ನಗರದ ಸ್ಟೀಪನ್(53), ಮಯ್ಯಡಿಯ ಮುತ್ತಯ್ಯ ಮೊಗವೀರ(41), ರಾಘವೇಂದ್ರ(42), ಸೂರ್ಕುಂದದ ರವಿಚಂದ್ರ ದೇವಾಡಿಗ (47), ಬಾಡಾದ ಗಣೇಶ(46), ಸುಬ್ರಾಯ(45) ಎಂಬವರು ಬಂಧಿತ ಆರೋಪಿಗಳು. ಇವರಿಂದ 2430 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.