ಮಿಸ್ಬಾ ಝರಾತುಲ್ ಖುರ್ ಆನ್ ಪ್ರಿ ಸ್ಕೂಲ್ ಪ್ರಾರಂಭೋತ್ಸವ

Update: 2019-06-24 10:20 GMT

ಮಂಗಳೂರು: ಮಿಸ್ಬಾ ನಾಲೇಜ್ ಫೌಂಡೇಶನ್ ಒಂದು ಸಮಾಜಮುಖಿಯಾದ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.  ಇದು ವಿದ್ಯಾರ್ಥಿನಿಯರ ಭವಿಷ್ಯವನ್ನು ರೂಪಿಸುತ್ತಿದೆ. ಯಾವುದೇ ಆರ್ಥಿಕ ಲಾಭವಿಲ್ಲದೆ ನಡೆಸುತ್ತಿರುವ ಈ ಸಂಸ್ಥೆ ಇನ್ನಷ್ಟು ಹೆಸರನ್ನು ಮಾಡಲಿ ಎಂದು ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಾಲಕ ಡಾ. ಟಿ.ಎಂ ಅಬ್ದುಲ್ ರವೂಫ್ ತಿಳಿಸಿದರು.

ಮಿಸ್ಬಾ ನಾಲೇಜ್ ಫೌಂಡೇಶನ್ ಇದರ ವತಿಯಿಂದ ನೂತನವಾಗಿ ಪ್ರಾರಂಭವಾದ ಮಿಸ್ಬಾ ಝರಾತುಲ್ ಖುರ್-ಆನ್ ಪ್ರಿ ಸ್ಕೂಲ್ ಪ್ರಾರಂಭೋತ್ಸವ ಅಲೀಫ್ ಡೇ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಿಸ್ಬಾ ಕಾಲೇಜಿನ ಪದವಿ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ ಬಿ.ಎ, ಬಿಕಾಂ ಪರೀಕ್ಷೆಯಲ್ಲಿ ಅತುನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ, ಸಾಧನೆ ಮಾಡಿದ ವಿದ್ಯಾರ್ಥಿನಿಯಯರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಅತುನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ವಿಶೇಷ ಬಹುಮಾನವನ್ನು ನೀಡಲಾಗುವುದು  ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಉದ್ಯಮಿ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಝಿಯಾವುದ್ದೀನ್ ಮಾತನಾಡಿ, ಶುಭ ಕೋರಿದರು.

ಕಾಲೇಜಿನ ಟ್ರಸ್ಟಿ ಹಾಗು ಧಾರ್ಮಿಕ ವಿದ್ವಾಂಸ ಅಬೂ ಸೂಫಿಯಾನ್ ಮಿಸ್ಬಾ ಝರಾತುಲ್ ಖುರ್-ಆನ್ ಪ್ರಿ ಸ್ಕೂಲ್ ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕಾಗಿದೆ. ಶೀಕ್ಷಣದ ಜೊತೆಗೆ ಧರ್ಮವನ್ನು ಬೋಧಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ವೈಬ್ಸ್ ಬೂಟಿಕ್ ಇದರ ಮಾಲಕ ಅಶ್ರಫ್ ಮಾತನಾಡಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡಲಾಗುವುದು ಎಂದರು.

ಮಿಸ್ಬಾ ನಾಲೇಜ್ ಫೌಂಡೇಶನ್  ಅಧ್ಯಕ್ಷ ಮಮ್ತಾಝ್ ಅಲಿ ಮಾತನಾಡಿ ಟ್ರಸ್ಟ್ ವತಿಯಿಂದ ಸಿಬಿಎಸ್ಇ ಸ್ಕೂಲನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ, ಅಬ್ದುಲ್ ಹಮೀದ್, ಇಕ್ಬಾಲ್ ಬಿ.ಎ, ವೈಬ್ಸ್ ಬೂಟಿಕ್ ಸಹ ಮಾಲಕರಾದ ಹಮೀದ್,  ಕಾಲೇಜಿನ ಸಂಚಾಲಕರಾದ ಬಿ.ಎ ನಝೀರ್, ಟ್ರಸ್ಟಿಗಳಾದ ಅಬ್ದುಲ್ ಹಕೀಮ್ ಫಾಲ್ಕನ್, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, , ಅಬ್ದುಲ್ ಹಮೀದ್ ಅಶ್ಕಾಫ್, ಬಾವ ಫಕ್ರುದ್ದೀನ್, ಟಿ.ಎಚ್ ಮೆಹಬೂಬ್, ಮೌಲನ ಹಬೀಬ್ ಸಖಾಫಿ, ಮೌಲನ ಅಶ್ರಫ್ ಸಖಾಫಿ, ಮೌಲನ ಹನೀಫ್ ಸಖಾಫಿ, ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಝಾಹಿದಾ ಜಲೀಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪ ಪ್ರಾಂಶುಪಾಲೆ ಸನಾ ಹುಸೈನ್ ಕಾರ್ಯಕ್ರಮ ನಿರ್ವಹಿಸಿದರು, ಮಮತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News