ಅಡ್ಡೂರ್ : ಈದ್ ಮಿಲನ್ ಸ್ಪೋರ್ಟ್ಸ್ ಡೇ ಕಾರ್ಯಕ್ರಮ

Update: 2019-06-23 06:35 GMT

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ  ಇದರ ವತಿಯಿಂದ ಈದ್ ಮಿಲನ್ ಸ್ಪೋರ್ಟ್ಸ್ ಡೇ ಕಾರ್ಯಕ್ರಮವನ್ನು  ಅಡ್ಡೂರಿನಲ್ಲಿ  ರವಿವಾರ ಆಯೋಜಿಸಲಾಯಿತು.

ಪಿಎಫ್ಐ ಕೈಕಂಬ ಡಿವಿಜನ್ ಅಧ್ಯಕ್ಷ  ಮೊಹಮ್ಮದ್ ಸಾದಿಕ್  ಅಧ್ಯಕ್ಷತೆ ವಹಿಸಿ, ಅತಿಥಿಗಳನ್ನು ಸ್ವಾಗತಿಸಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಸಾದಿಕ್ ಅವರು ಕ್ರೀಡೆ ಎಂಬುವುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆ ಯಾಗಿದೆ. ಕ್ರೀಡೆಗಳಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಈ ಸಂಧರ್ಭದಲ್ಲಿ ಇಂಡಿಯನ್ ಸೋಶಿಯಲ್ ಫಾರಮ್ ಸೌದಿ ಅರೇಬಿಯಾ ಇದರ ಸದಸ್ಯ ಅಬ್ದುಲ್ ಸಲಾಮ್ ಗೋಳಿಪಡ್ಪು ಮತ್ತು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಘಟಕಾಧ್ಯಕ್ಷ ಎ.ಕೆ. ಮುಸ್ತಫಾ ಅವರು ಮುಖ್ಯ ಅತಿಥಿಯಾಗಿ  ಭಾಗವಹಿಸಿದ್ದರು.

ಪಿಎಫ್ಐ ಡಿವಿಜನ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಎಡಪದವು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News