ಹಿರಿಯ ನಾಗರಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ: ಎಎಸ್ಪಿ ಕೃಷ್ಣಕಾಂತ್

Update: 2019-06-23 14:14 GMT

ಶಿರ್ವ, ಜೂ.23: ಅನೇಕ ಸಮಸ್ಯೆಗಳ ಸುಳಿಯಲ್ಲಿ ಕಷ್ಟಕರ ಜೀವನ ನಡೆಸು ತ್ತಿರುವ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಪೋಲಿಸ್ ಇಲಾಖೆ ತ್ವರಿತವಾಗಿ ಸ್ವಂದಿಸಲಿದೆ ಎಂದು ಕಾರ್ಕಳ ಪೊಲೀಸ್ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಪಿ.ಕೃಷ್ಣಕಾಂತ್ ಹೇಳಿದ್ದಾರೆ.

ಶಿರ್ವ ಪೋಲಿಸ್ ಠಾಣಾ ವತಿಯಿಂದ ಶಿರ್ವ ಮಹಿಳಾ ಸೌಧದಲ್ಲಿ ಶನಿವಾರ ಆಯೋಜಿಸಲಾದ ಹಿರಿಯ ನಾಗರಿಕರ ಸಭೆಯಲ್ಲಿ ಹಿರಿಯರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡುತಿದ್ದರು.

ಒಂಟಿತನ, ಅಸಹಾಯಕತೆ, ರಕ್ಷಣೆ ಇಲ್ಲದಿರುವುದು, ಜೀವನದಲ್ಲಿ ಜಿಗುಪ್ಸೆ, ಕೌಟುಂಬಿಕ ಸಮಸ್ಯೆಗಳು, ಆತ್ಮಹತ್ಯೆ, ಮನೆಯಲ್ಲಿ ಕಳ್ಳತನ ಇನ್ನಿತರ ಸಮಸ್ಯೆಗಳಿಗೆ ಪೋಲಿಸ್ ಇಲಾಖೆ ತ್ವರಿತವಾಗಿ ಸ್ವಂದಿಸಲಿದ್ದು, ಅವರಿಗೆ ಸಕಾಲಿಕ ಮಾಹಿತಿ ಹಾಗೂ ನೆರವು ನೀಡಿ ಆತ್ಮವಿಶ್ವಾಸ ವೃದ್ದಿಸುವಲ್ಲಿ ಪೋಲಿಸ್ ಇಲಾಖೆ ಕಾರ್ಯ ನ್ಮೋಖವಾಗಲಿದೆ ಎಂದು ಅವರು ತಿಳಿಸಿದರು.

ಹಿರಿಯ ನಾಗರಿಕರಿಗೆ ಕಾನೂನು ಪ್ರಕಾರ ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಒದಗಿಸು ಕೊಡುವಲ್ಲಿ ಸಹಕಾರ ನೀಡಲಾಗುವುದು. ಹಿರಿಯ ನಾಗರಿಕರ ರಕ್ಷಣೆಗಾಗಿಯೇ ಕಾನೂನುಗಳಿದ್ದು, ಕಾನೂನು ಪ್ರಕಾರ ರಕ್ಷಣೆ ನೀಡಲು ಪೋಲಿಸ್ ಇಲಾಖೆ ಬದ್ಧವಾಗಿದೆ. ಯಾವುದೇ ಮುಚ್ಚುಮರೆಯಿಲ್ಲದೆ ಪೋಲಿಸ್ ಇಲಾಖೆಯನ್ನು ಸಂಪರ್ಕಿಸಬಹುದು. ಸ್ಥಳಿಯವಾಗಿ ಪೋಲಿಸರು ಸ್ಪಂದಿಸದಿದ್ದಲ್ಲಿ ನವ್ಮುನ್ನು ಭೇಟಿಯಾಗಬಹುದು ಎಂದರು.

ರಸ್ತೆ ಸುರಕ್ಷತೆ, ಡಿವೈಡರ್ ದಾಟುವುದು, ಶಾಲಾ ಕಾಲೇಜು ಪ್ರಾರಂಭ ಹಾಗೂ ಸಂಜೆ ಬಿಡುವಿನ ವೇಳೆಯಲ್ಲಿ ಸಂಚಾರ ಸಮಸ್ಯೆ, ಟ್ರಾನ್ಸ್‌ಫಾರ್ಮರ್ ಸಮಸ್ಯೆ, ಅಂಗಡಿ ಮುಂಭಾಗದಲ್ಲಿ ಗೂಡ್ ್ಸವಾಹನಗಳ ನಿಲುಗಡೆ, ಮಿತಿ ಮೀರಿದ ವೇಗದಲ್ಲಿ ಚಲಿಸುವ ವಾಹನಗಳು, ದ್ವಿಚಕ್ರ ವಾಹನಗಳು, ಬಸ್‌ಗಳ ಪುಟ್‌ಬೋರ್ಡ್‌ಗಳಲ್ಲಿ ನೇತಾಡುವುದು, ಮಹಿಳೆಯರಿಗೆ ಕಿರುಕುಳ, ಗೂರ್ಖನ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ, ರಸ್ತೆ ಬದಿಯಲ್ಲಿ ಅನಧಿಕೃತ ಟೆಲಿ ಫೋನ್ ಬೂತ್, ಟೆಂಪೊ ಟ್ಯಾಕ್ಸಿ ಚಾಲಕರ ಅನಧಿಕೃತ ಕಟ್ಟೆ, ಮನೆಮನೆಗೆ ಬರುವ ಭಿಕ್ಷುಕರು ಸಹಿತ ಹಲವು ದೂರುಗಳು ಸಭೆಯಲ್ಲಿ ಕೇಳಿ ಬಂದವು.

ಸಾರ್ವಜನಿಕರ ಪರವಾಗಿ ಮಾಜಿ ಜಿಪಂ ಸದಸ್ಯೆ ಲೀನಾ ಮಥಾಯಸ್, ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀಪತಿ ಕಾಮತ್, ನಿವೃತ್ತ ಶಿಕ್ಷಕ ಕುಶಲ ಶೆಟ್ಟಿ, ಶೇಖರ ಶೆಟ್ಟಿ, ಸಂತೋಷ್ ಅಚಾರ್ಯ ಸಭೆಯಲ್ಲಿ ನೀಡಿದ ದೂರಿಗೆ ತಕ್ಷಣವೇ ಸ್ಪಂದಿಸುವಂತೆ ಠಾಣಾಧಿಕಾರಿಗಳಿಗೆ ಎಎಸ್ಪಿ ಸೂಚಿಸಿದರು.

ಶಿರ್ವ ಠಾಣಾಧಿಕಾರಿ ಅಬ್ದುಲ್ ಖಾದರ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಎಎಸ್‌ಐ ಸುರೇಶ್ ಸ್ವಾಗತಿಸಿದರು. ಪ್ರೊಬೆಷನರಿ ಉಪನಿರೀಕ್ಷಕ ಮಹಾದೇವ ಬೋಂಸಲೆ, ಎಎಸ್‌ಐ ಕೃಷ್ಣಾಚಾರ್ಯ, ಹೆಡ್ ಕಾನ್ಟೇಬಲ್ ಗಳಾದ ದಯಾನಂದ, ಉಮೇಶ, ವೆಂಕಟೇಶ, ಸಿಬ್ಬಂದಿಗಳಾದ ಶಿವಕುಮಾರ್, ಸುರೇಶ್, ಶ್ವೇತಾ, ಸಂಗೀತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News