ನವಾಝ್ ಶರೀಫ್‌ಗೆ ಜೈಲಿನಲ್ಲಿ ಹೃದಯಾಘಾತವಾಗಿತ್ತು ಎಂದ ಪುತ್ರಿ

Update: 2019-06-23 15:02 GMT

 ಇಸ್ಲಾಮಾಬಾದ್, ಜೂ.23: ತನ್ನ ತಂದೆ ಪಾವಲ್ಪಿಂಡಿಯ ಅದಿಯಾಲ ಜೈಲಿನಲ್ಲಿ ಕಳೆದ ವರ್ಷ ಹೃದಯಾಘಾತಕ್ಕೆ ಒಳಗಾಗಿದ್ದರು. ಆದರೆ ಈ ಬಗ್ಗೆ ಸರಕಾರ ಅವರ ಕುಟುಂಬವನ್ನು ಕತ್ತಲಲ್ಲಿಟ್ಟಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಪುತ್ರಿ ಮರಿಯಮ್ ನವಾಝ್ ತಿಳಿಸಿದ್ದಾರೆ.

 ನವಾಝ್ ಶರೀಫ್ ಸದ್ಯ ಭ್ರಷ್ಟಾಚಾರ ಪ್ರಕರಣದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ವರದಿಗಾರರ ಜೊತೆ ಮಾತನಾಡಿದ, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಝ್ ಪಕ್ಷದ ಉಪಾಧ್ಯಕ್ಷೆ ಮರಿಯಮ್, ಕಳೆದ ವರ್ಷ ಜುಲೈಯಲ್ಲಿ ಶರೀಫ್ ಜೈಲಿನಲ್ಲಿ ಹೃದಯಾಘಾತಕ್ಕೊಳಗಾಗಿದ್ದರು ಎಂದು ಉಲ್ಲೇಖಿಸಲಾಗಿದ್ದ ಆಸ್ಪತ್ರೆಯ ಪ್ರಮಾಣಪತ್ರವನ್ನು ಪ್ರದರ್ಶಿಸಿದ್ದಾರೆ ಮತ್ತು ಈ ವಿಷಯದಲ್ಲಿ ಸರಕಾರ ಮತ್ತು ಜೈಲು ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ತಂದೆಗೆ ಈಜಿಪ್ಟ್‌ನ ಮಾಜಿ ರಾಷ್ಟ್ರಪತಿ ಮುಹಮ್ಮದ್ ಮುರ್ಸಿ ಅವರಿಗೆ ಆದ ಪರಿಸ್ಥಿತಿ ಆಗಲು ಬಿಡುವುದಿಲ್ಲ ಎಂದು ಮರಿಯಮ್ ತಿಳಿಸಿದ್ದಾರೆ.

ನನ್ನ ತಂದೆಗೆ ಇನ್ನೊಂದು ಬೈಪಾರ್ಸ್ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರಿಗೇನಾದರೂ ಆದರೆ ಅದಕ್ಕೆ ಇದರಲ್ಲಿ ಭಾಗಿಯಾಗಿರುವ ಎಲ್ಲರೂ ಜವಾಬ್ದಾರರಾಗುತ್ತಾರೆ ಎಂದು ಮರಿಯಮ್ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News