ಯುವಕ ನಾಪತ್ತೆ

Update: 2019-06-23 16:41 GMT

ಕಾರ್ಕಳ, ಜೂ.23: ಕಾರ್ಕಳದಲ್ಲಿ ಪೈಟಿಂಗ್ ಕೆಲಸ ಮಾಡಿಕೊಂಡಿದ್ದ ದುರ್ಗಾ ಗ್ರಾಮದ ಗೋಳಿದಡಿ ನಿವಾಸಿ ಗಂಗಾಧರ ನಾಯ್ಕ್ ಎಂಬವರ ಮಗ ಪ್ರಜೀನ್ ನಾಯ್ಕ (21) ಎಂಬವರು ನಾಪತ್ತೆಯಾಗಿದ್ದಾರೆ.

ಜೂ.19ರಂದು ಬೆಳಿಗ್ಗೆ 10:30ರಿಂದ ಸಂಜೆ 6ಗಂಟೆ ಮಧ್ಯಾವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಪ್ರಜೀನ್ ನಾಯ್ಕಾ ತನ್ನ ಪಲ್ಸರ್ ಬೈಕಿನೊಂದಿಗೆ ಹಾಗೂ ಪೈಟಿಂಗ್ ಮಾಡುತ್ತಿದ್ದ ಕೆಲವು ಸಾಮಾಗ್ರಿಯೊಂದಿಗೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News