×
Ad

ಬ್ರಹ್ಮಾವರ: ಯುವಕನ ಮೃತದೇಹ ಪತ್ತೆ

Update: 2019-06-23 22:20 IST

ಬ್ರಹ್ಮಾವರ, ಜೂ.23: ವಾರಂಬಳ್ಳಿ ಗ್ರಾಮದ ಮಾಲ್ತಾರು ನಿವಾಸಿ ರಮೇಶ ಪೂಜಾರಿ ಎಂಬವರ ಮನೆಯ ಸಮೀಪ ತೋಡಿನಲ್ಲಿ ಸುಮಾರು 30 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ರವಿವಾರ ಮಧ್ಯಾಹ್ನ 12 ಗಂಟೆಗೆ ಪತ್ತೆಯಾಗಿದೆ.

ಮೃತದೇಹವು ತೋಡಿನಲ್ಲಿ ಕವಚಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದು, ಮೃತದೇಹದ ಮೇಲೆ ಕಪ್ಪುಬಣ್ಣದ ಅಂಗಿ ಇದ್ದು ಪ್ಯಾಂಟ್ ಚಡ್ಡಿ ಯಾವುದೂ ಇರಲಿಲ್ಲ. ಮೃತ ದೇಹದ ಕುತ್ತಿಗೆಯಲ್ಲಿ ಬೈರಸ್ಯನ್ನು ಸೀಳಿ ಮಾಡಿದ ಹಗ್ಗ ಕುತ್ತಿಗೆಗೆ ಸುತ್ತಿಕೊಂಡಿರುವುದು ಕಂಡು ಬಂದಿದೆ.

ಮೃತ ವ್ಯಕ್ತಿ ಕುತ್ತಿಗೆಗೆ ಬೈರಸ್ನಿಂದ ಮಾಡಿದ ಹಗ್ಗದಿಂದ ನೇಣು ಬಿಗಿದು ಕೊಳ್ಳಲು ಪ್ರಯತ್ನಿಸುವಾಗ ಕಾಲು ಜಾರಿ ತೋಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಅಥವಾ ಯಾರೋ ದುಷ್ಕರ್ಮಿಗಳು ವ್ಯಕ್ತಿಯ ಕುತ್ತಿಗೆಗೆ ಬೈರಸ್ ನಿಂದ ಮಾಡಿದ ಹಗ್ಗ ಬಿಗಿದು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತರ ಮರಣದ ಬಗ್ಗೆ ಅನುಮಾನವಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News