ಉಡುಪಿ: ಇಂದ್ರಾಳಿಯ ದ್ವಿಚಕ್ರ ವಾಹನ ಶೋರೂಂ ನಲ್ಲಿ ಭಾರೀ ಬೆಂಕಿ

Update: 2019-06-23 17:49 GMT

ಉಡುಪಿ: ಇಂದ್ರಾಳಿ ಪೆಟ್ರೋಲ್ ಬಂಕ್ ಸಮೀಪದಲ್ಲಿರುವ ದ್ವಿಚಕ್ರ ವಾಹನ ಶೋರೂಂ ಇರುವ ಕಟ್ಟಡದಲ್ಲಿ ರವಿವಾರ ರಾತ್ರಿ 9.30ರ ಸುಮಾರಿಗೆ ಬೆಂಕಿ ಅಕಸ್ಮಿಕ ಸಂಭವಿಸಿದ್ದು, ಶೋರೂಮ್ ನ ಹಲವು ದ್ವಿಚಕ್ರ ವಾಹನಗಳು ಬೆಂಕಿಯಲ್ಲಿ ಸಂಪೂರ್ಣ ಸುಟ್ಟು ಹೋಗಿವೆ.

ಎರಡು ಮಹಡಿಯ ಈ ಕಟ್ಟಡದಲ್ಲಿ ಒಂದನೇ ಮಹಡಿಯಲ್ಲಿ  ಜಯರಾಮ್ ಎಂಬವರ ಎಲ್ಎಮ್ಎಲ್ ವೆಸ್ಪ ಕಂಪನಿಯ ದ್ವಿಚಕ್ರವಾಹನಗಳ ಶೋರೂಮ್ ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಗ್ನಿಶಾಮಕ ದಳದ 3 ವಾಹನಗಳಲ್ಲಿ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಯನ್ನು ತಡರಾತ್ರಿಯವರೆಗೂ ಮುಂದುವರಿಸಿದ್ದಾರೆ. ಈ ಹಿಂದೆ ಇಲ್ಲಿ ಜಯರಾಮ್ ಮಾಲಕತ್ವದ ಹೀರೋ ಕಂಪನಿ ಜೈದೇವ್ ಮೋಟರ್ಸ್ ಇದ್ದು  ಅದನ್ನು  ಅವರು  ಕಳೆದ ವರ್ಷ ಮುಚ್ಚಿ  ವೆಸ್ಪಾ ಕಂಪನಿಯ ಶೋರೂಮನ್ನು  ಆರಂಭಿಸಿದ್ದರು.

ಕಟ್ಟಡದ ಎರಡನೇ ಮಹಡಿಯಲ್ಲಿ ಜಿಮ್ ಸೆಂಟರ್ ಹಾಗೂ ಕೆಳಗಿನ ಮಹಡಿಯಲ್ಲಿ ದಂತ ಕ್ಲಿನಿಕ್‌ ಇದೆ. ಆದರೆ ಇವುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ಬೆಂಕಿ ಅವಘಡ ಸಂಭವಿಸಿದ ಕಟ್ಟಡದ ಸಮೀಪದಲ್ಲಿ ಪೆಟ್ರೋಲ್ ಬಂಕ್‌ ಇದ್ದು, ಅಗತ್ಯ ಕ್ರಮಕೈ ಕೊಳ್ಳಲಾಗಿದೆ. ಇಡೀ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಮಾಡಲಾಗಿದೆ. ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಶೋರೂಮ್ ನಲ್ಲಿರುವ ಬಹುತೇಕ ದ್ವಿಚಕ್ರ ವಾಹನಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಇದರಿಂದ ಕೋಟ್ಯಾಂತರ ರೂ. ನಷ್ಟ ಅಂದಾಜಿಸಲಾಗಿದೆ. ಬೆಂಕಿಯಿಂದಾಗಿ ದಟ್ಟ ಹೊಗೆ ಪರಿಸರದಲ್ಲಿ ಆವರಿಸಿದೆ.  ಯಾವುದೇ ಪ್ರಾಣ ಅಪಾಯವಾಗಿರುವ ಬಗ್ಗೆ ವರದಿಯಾಗಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News