ಬುದ್ಧಿಶಕ್ತಿ ಹೆಚ್ಚಿಸಲು ಚೆಸ್ ಸಹಕಾರಿ: ನಿತ್ಯಾನಂದ ಶೆಟ್ಟಿ

Update: 2019-06-23 17:13 GMT

ಹೆಬ್ರಿ, ಜೂ.23: ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಟಿವಿ, ಮೊಬೈಲ್‌ನಿಂದ ದೂರವಿದ್ದು, ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಚೆಸ್ ಆಡುವುದರಿಂದ ಮಕ್ಕಳು ಬುದ್ದಿಶಕ್ತಿ ಸಂಪಾದಿಸುವುದರೊಂದಿಗೆ ಮಾನಸಿಕ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಹೆರ್ಗ ವಿಠಲ ಶೆಟ್ಟಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಶೆಟ್ಟಿ ಹೇಳಿದ್ದಾರೆ.

ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಪ್ರತಿ ಶನಿವಾರ ನಡೆಯಲಿ ರುವ ಉಚಿತ ಚೆಸ್ ತರಬೇತಿ ತರಗತಿಯನ್ನು ರವಿವಾರ ಚೆಸ್ ಆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆ ವಹಿಸಿದ್ದ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಪ್ರತಿ ಶನಿವಾರ ಮಧ್ಯಾಹ್ನ 3ರಿಂದ 4ಗಂಟೆಯ ವರೆಗೆ ಉಚಿತ ಚೆಸ್ ತರಬೇತಿ ನಡೆಯಲಿದೆ ಎಂದರು.

ಚಾಣಕ್ಯ ಡಾನ್ಸ್ ಗ್ರಿಪ್‌ನ ನೃತ್ಯ ನಿರ್ದೇಶಕ ಅವಿನಾಶ್ ಪೆರ್ಡೂರು, ಪಂಚವಟಿ ಕನ್‌ಸ್ಟ್ರಕ್ಷನ್‌ನ ಆಡಳಿತ ನಿರ್ದೇಶಕ ಸುಕೇಶ್ ಕುಲಾಲ್, ಚಿತ್ರಕಲಾ ಶಿಕ್ಷಕಿ ಪ್ರಿಯಾ ಶೆಟ್ಟಿ ಅಜೆಕಾರು, ಸಂಗೀತ ಗುರು ಉದಯ ಶೆಟ್ಟಿ ಮುಟ್ಲಪಾಡಿ, ಧನ್ವಿತ್, ಮಾನ್ಯ ಮೊದಲಾದವರು ಉಪಸ್ಥಿತರಿದ್ದರು.

ಚಾಣಕ್ಯ ಟ್ಯುಟೋರಿ ಯಲ್ ಕಾಲೇಜಿನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಂಪ್ಯೂಟರ್ ಶಿಕ್ಷಕಿ ಪ್ರಜ್ಞಾ ಮುದ್ರಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News