ಸಾಂಕ್ರಾಮಿಕ ರೋಗಳಿಗೆ ಆಯುರ್ವೇದ ಚಿಕಿತ್ಸಾ ಶಿಬಿರ

Update: 2019-06-23 17:14 GMT

ಉಡುಪಿ, ಜೂ.23: ನಗರದ ವಿದ್ಯಪೂರ್ಣ ಸಂಕೀರ್ಣದ ಒಂದನೇ ಮಹಡಿ ಯಲ್ಲಿರುವ ಖುಶಿ ಆಯುರ್ಕೇರ್ನಲ್ಲಿ ಮಲೇರಿಯ, ಟೈಫೈಡ್, ಡೆಂಗ್ಯು, ಲೆಪ್ಟೊಸ್ಪೈರೊಸಿಸ್ ಸಾಂಕ್ರಾಮಿಕ ರೋಗಗಳ ಆಯುರ್ವೇದ ಚಿಕಿತ್ಸಾ ಹಾಗೂ ಉಚಿತ ಮಾಹಿತಿ ಶಿಬಿರವನ್ನು ರವಿವಾರ ಏರ್ಪಡಿಸಲಾಗಿತ್ತು.

ಶಿಬಿರವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ರೋಗವಾಹಕ ಜನಿತ ರೋಗ ಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ಮಾತನಾಡಿ, ಆಯುರ್ವೇದ ಚಿಕಿತ್ಸೆಯು ಸಾಂಕ್ರಾಮಿಕ ರೋಗಗಳಿಗೆ ಬಹಳಷ್ಟು ರಿಣಾಮಕಾರಿಯಾಗಿದೆ ಎಂದು ತಿಳಿಸಿದರು.

ಶಿಬಿರದ ಆಯೋಜಕ ಡಾ. ವಿಜಯೇಂದ್ರ ಭಟ್ ಮಾತನಾಡಿ, ಸಾಂಕ್ರಾ ಮಿಕ ರೋಗಗಳಿಗೆ ಮುಖ್ಯವಾಹಿನಿಯ ಲಾಕ್ಷಣಿಕ ಚಿಕಿತ್ಸೆಯೊಂದಿಗೆ ಆಯು ರ್ವೇದ ಚಿಕಿತ್ಸೆ ಪಡೆದಾಗ ಅಡ್ಡಪರಿಣಾಮಗಳು, ಜ್ವರದ ಪುನರಾವರ್ತನೆ, ರಕ್ತಸ್ರಾವ, ಅಸಿಡಿಟಿ, ಅತ್ಯಧಿಕ ಸುಸ್ತು ಮುಂತಾದ ತೊಂದರೆಗಳೂ ನಿವಾರಣೆ ಆಗುವುದಲ್ಲದೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News