ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ 34ನೇ ಘಟಕ ಉದ್ಘಾಟನೆ

Update: 2019-06-23 17:22 GMT

ಮಂಗಳೂರು, ಜೂ.23: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ 34ನೇ ಘಟಕ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಪುತ್ತಿಗೆ ಮಠದಲ್ಲಿ ಜೂ.29ರಂದು ಉದ್ಘಾಟನೆಯಾಗಲಿದೆ. ಬಳಿಕ ಅಮೆರಿಕದ 12 ರಾಜ್ಯಗಳಲ್ಲಿ ಯಕ್ಷಧ್ರುವ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.

ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅಮೆರಿಕದ ಸ್ಥಳೀಯ ಜನಪ್ರತಿನಿಧಿಗಳು ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಭಾಗವಸಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ಸೆ.3ರರವರೆಗೆ ಅಲ್ಲಿನ 12 ವಿವಿಧ ರಾಜ್ಯಗಳಲ್ಲಿ 15 ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಲಾಗುವುದು ಎಂದರು.

ದ.ಕ.ದಿಂದ 8 ಮಂದಿ ಕಲಾವಿದರು ಅಲ್ಲಿಗೆ ತೆರಳುತ್ತಿದ್ದು, ಅಮೆರಿಕದಲ್ಲಿರುವ ಸ್ಥಳೀಯ ಕಲಾವಿದರನ್ನು ಪ್ರದರ್ಶನ ತಂಡದಲ್ಲಿ ಸೇರಿಸಲಾಗು ವುದು. ಪ್ರಸಂಗಗಳ ಆಯ್ದ ಭಾಗಗಳನ್ನು ಮಾತ್ರ ಆಯ್ದುಕೊಂಡು 2 ಗಂಟೆಯ ಅವಧಿಯಲ್ಲಿ ಯಕ್ಷ ಪ್ರದರ್ಶನ ನಡೆಯಲಿದೆ ಎಂದು ಪಟ್ಲ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News