ಬ್ಯಾರಿ ‘ಕಥೆ, ಕವನ, ಚುಟುಕು’ ಸ್ಪರ್ಧೆಗೆ ಆಹ್ವಾನ

Update: 2019-06-23 17:26 GMT

ದೇರಳಕಟ್ಟೆ, ಜೂ.23: ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ ‘ಮೇಲ್ತೆನೆ’ಯ ವತಿಯಿಂದ ಬ್ಯಾರಿ ಕಥೆ, ಕವನ, ಚುಟುಕುಗಳ ಸಂಕಲನವನ್ನು ‘ಮೇಲ್ತೆನೆ ಸಾಹಿತ್ಯ ಸ್ಪರ್ಧೆ’ಗಾಗಿ ಆಹ್ವಾನಿಸಿದೆ.

ಕಥೆ, ಕವನ, ಚುಟುಕುಗಳು ಈ ಹಿಂದೆ ಎಲ್ಲೂ ಪ್ರಕಟಗೊಂಡಿರಬಾರದು ಅಥವಾ ಪ್ರಸಾರಗೊಂಡಿರಬಾರದು. ಕನಿಷ್ಠ 3 ಪುಟದ (ಎ4 ಸೈಜ್‌ನಲ್ಲಿ ಡಿಟಿಪಿ ಮಾಡಿಸಿರಬೇಕು) 10 ಕಥೆಗಳನ್ನು ಕಳುಹಿಸಬೇಕು. ಕವನವು ಕನಿಷ್ಠ 50 ಮತ್ತು ಚುಟುಕು ಕನಿಷ್ಠ 100 ಇರಬೇಕು. ಮೂರೂ ವಿಭಾಗಕ್ಕೆ ಪ್ರತ್ಯೇಕ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಆಯ್ಕೆಯಾದ ಸಂಕಲನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.

ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಲಗತ್ತಿಸಬೇಕು. ಆಸಕ್ತರು ‘ಮೇಲ್ತೆನೆ ಸಾಹಿತ್ಯ ಸ್ಪರ್ಧೆ ವಿಭಾಗ-2019’ ದೇರಳಕಟ್ಟೆ ಡಯಾಗ್ನಸ್ಟಿಕ್ ಸೆಂಟರ್, ದೇರಳಕಟ್ಟೆ, ಮಂಗಳೂರು ತಾಲೂಕು ಈ ವಿಳಾಸಕ್ಕೆ ಸೆಪ್ಟಂಬರ್ 30ರೊಳಗೆ ಅಂಚೆ ಮೂಲಕ ಕಳುಹಿಸಬಹುದು ಅಥವಾ ಮುಖತಃ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಮೊ.ಸಂ: 9481017495 ನ್ನು ಸಂಪರ್ಕಿಸಬಹುದು ಎಂದು ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News