ಪುತ್ತೂರು ಅನ್ಸಾರುದ್ದೀನ್ ಯತೀಂ ಖಾನಾದ ಅಧ್ಯಕ್ಷರಾಗಿ ಕೆ.ಪಿ.ಅಹ್ಮದ್ ಹಾಜಿ ಪುನರಾಯ್ಕೆ

Update: 2019-06-23 17:44 GMT
ಕೆ.ಪಿ.ಅಹ್ಮದ್ ಹಾಜಿ

ಪುತ್ತೂರು: ಸಾಲ್ಮರದಲ್ಲಿರುವ ಅನ್ಸಾರುದ್ದೀನ್ ಯತೀಂಖಾನಾದ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಕರ್ನಾಟಕ ಇಸ್ಲಾಮಿಕ್ ಅಕಾಡಮಿ ಅಧ್ಯಕ್ಷರಾದ ಉದ್ಯಮಿ ಕೆ.ಪಿ. ಅಹ್ಮದ್ ಹಾಜಿ ಪುನರಾಯ್ಕೆಗೊಂಡಿದ್ದಾರೆ.

ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಾಲ್ಮರ ಅನ್ಸಾರುದ್ದೀನ್ ಯತೀಂ ಖಾನಾದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಸಾಲ್ಮರ, ಖಜಾಂಜಿಯಾಗಿ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ವಕ್ಫ್ ಸಮಿತಿಯ ಮಾಜಿ ಸದಸ್ಯರಾದ ಪಿ.ಬಿ. ಹಸನ್ ಹಾಜಿ, ಉಪಾಧ್ಯಕ್ಷರಾಗಿ ಕೆ.ಎಂ. ಬಾವಾ ಹಾಜಿ ಕೂರ್ನಡ್ಕ, ನ್ಯಾಯವಾದಿ ನೋಟರಿ ನೂರುದ್ದೀನ್ ಸಾಲ್ಮರ, ಜೊತೆ ಕಾರ್ಯದರ್ಶಿಗಳಾಗಿ ಬಶೀರ್ ಹಾಜಿ ಶೇಖಮಲೆ, ಕೆ.ಎಂ. ಅಬ್ದುಲ್ಲ ಕೂರ್ನಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಆಝಾದ್ ಅವರನ್ನು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೇಖ್ ಝೈನುದ್ದೀನ್, ಯು. ಅಬ್ದುಲ್ಲ ಹಾಜಿ ಸಾಲ್ಮರ, ಅಬ್ದುಲ್ ರಹಿಮಾನ್ ಸಾಲ್ಮರ, ವಿ.ಕೆ. ಶರೀಫ್ ಬಪ್ಪಳಿಗೆ, ಸೂಫಿ ಬಪ್ಪಳಿಗೆ, ಎಲ್.ಟಿ. ಹಸೈನಾರ್ ಹಾಜಿ, ಅಬೂಬಕ್ಕರ್ ಪರ್ಲಡ್ಕ ಆಯ್ಕೆಯಾದರು.

ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಖಾನ್ ಬಪ್ಪಳಿಗೆ ಕಾರ್ಯಕ್ರಮ ನಿರ್ವಹಿಸಿದರು. ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ವರದಿ ಮಂಡಿಸಿದರು. ಸಿಬ್ಬಂದಿ ಅಬ್ದುಲ್ ಲತೀಫ್ ಲೆಕ್ಕಪತ್ರ ಮಂಡಿಸಿದರು.  ಮ್ಯಾನೇಜರ್ ಇಸ್ಮಾಯಿಲ್ ನೆಲ್ಯಾಡಿ,  ನಝೀರ್ ಸಹಕರಿಸಿದರು.

ಪುತ್ತೂರು ಬದ್ರಿಯಾ ಮಸೀದಿಯ ಮುಹಝಿನ್ ಅಬ್ದುಲ್ ಖಾದರ್ ದುವಾ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News