×
Ad

ಪಡುಬಿದ್ರಿ: ಮೀನುಗಳ ಮಾರಣಹೋಮ

Update: 2019-06-23 23:37 IST

ಪಡುಬಿದ್ರಿ: ಪಡುಬಿದ್ರಿ-ಹೆಜಮಾಡಿಯ ಕಾಮಿನಿ ನದಿ ಮಲಿನಗೊಂಡು ನೂರಾರು ಮೀನುಗಳ ಸಾವನ್ನಪ್ಪಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. 

ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದ ಕಾಮಿನಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಕಾಡಿಪಟ್ಣ, ನಡಿಪಟ್ಣ ಪರಿಸರದಲ್ಲಿ ನೆರೆ ಉಂಟಾಗುವ ಭೀತಿ ಎದುರಾಗಿತ್ತು. ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಶನಿವಾರದಂದು ಪಡುಬಿದ್ರಿ-ಹೆಜಮಾಡಿ ಅಳಿವೆ ಪ್ರದೇಶದಲ್ಲಿ ತೆರವುಮಾಡಿ ನದಿ ನೀರು ಸಮುದ್ರಕ್ಕೆ ಹರಿಯಲು ದಾರಿ ಮಾಡಲಾಗಿತ್ತು. ನದಿಯಲ್ಲಿ ಪಾಚಿಗಟ್ಟಿದ ನೀರು ಸಮುದ್ರ ಸೇರುತ್ತಿರುವ ಸಂದರ್ಭ ಮೀನುಗಳು ಸತ್ತಿರುವುದು ಗೊತ್ತಾಗಿದೆ. ಆದರೆ ಇದೀಗ ನೀರು ಕಪ್ಪಾಗಿ ದುರ್ವಾಸನಬೆ ಬೀರುತ್ತಿತ್ತು. ಪರಿಸರದ ಬಾವಿ ಮಲಿನಗೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ. 

ಅಳಿವೆ ಬಳಿ ಸತ್ತಿರುವ ಮೀನುಗಳನ್ನು ಕೆಲವು ಸ್ಥಳೀಯರು ಭಾನುವಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಪ್ರಸಂಗ ನಡೆಯಿತು. ನದಿಯಲ್ಲಿ ಮೀನು ಹೇರಳವಾಗೊದ್ದು, ಕೆಲವು ದಿನಗಳಿಂದ ಮೀನುಗಾರರು ಬಲೆ ಬೀಸಿ ಇಲ್ಲಿ ಮೀನುಗಾರಿಕೆ ನಡೆಸುತಿದ್ದರು. ಇದೀಗ ಮೀನುಗಳು ಸಾವನ್ನಪ್ಪಿದ ಪರಿಣಾಮ ಇಲ್ಲಿನ ಜನ ಆತಂಕಕೀಡಾಗಿದ್ದಾರೆ. 

ಎಂಡ್‍ಪಾಯಿಂಟ್‍ನಲ್ಲಿ ಕಡಲ ಅಬ್ಬರ: ಕಳೆದ ಎರಡು ದಿನಗಳಿಂದ ಪಡುಬಿದ್ರಿ, ಕಾಪು ಪರಿಸರದಲ್ಲಿ ಕಡಲು ಪ್ರಕ್ಷುಬ್ದಗೊಂಡಿದೆ. ಪಡುಬಿದ್ರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬ್ಲೂಪ್ಲ್ಯಾಗ್ ಯೋಜನಾ ಪ್ರದೇಶಕ್ಕೆ ಕಡಲ ತೀರದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮಣ್ಣಿನ ರಸ್ತೆ ಕೊಚ್ಚಿ ಹೋಗಿದೆ.
ಸುಮಾರು 500 ಮೀಟರ್ ಸರ್ಕಾರಿ ಜಮೀನಿನಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಅನುಷ್ಟಾನವಾಗಲಿರುವ ಬ್ಲೂ ಪ್ಲ್ಯಾಗ್ ಬೀಚ್ ಯೋಜನೆಗೆ ಅನುಕೂಲವಾಗುವಂತೆ 50 ಲಕ್ಷ ರೂ ವೆಚ್ಚದಲ್ಲಿ 300 ಮೀಟರ್ ವ್ಯಾಪ್ತಿಯಲ್ಲಿ ಕೆಐಆರ್‍ಡಿಎಲ್ ಹಾಗೂ ಸಣ್ಣ ನೀರಾವರಿ ಇಲಾಖೆ ಮೂಲಕ ಸಮುದ್ರದ ಪೂರ್ವ ಭಾಗದಲ್ಲಿರುವ ಕಾಮಿನಿ ನದಿಗೆ ತಡೆಗೋಡೆ ಕಾಮಗಾರಿ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News