ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ: ನಾಲ್ವರ ಬಂಧನ

Update: 2019-06-24 16:39 GMT

ಮಣಿಪಾಲ, ಜೂ.24: ಮಣಿಪಾಲದ ಸುಷ್ಮಾ ಲಾಡ್ಜ್ ಗೆ ಜೂ.23ರಂದು ಸಂಜೆ ವೇಳೆ ದಾಳಿ ನಡೆಸಿದ ಉಡುಪಿ ಡಿಸಿಐಬಿ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ.

ಹೊನ್ನಾವರದ ವಿವೇಕಾನಂದ ವಿ.ಸಾವಂತ್(34), ಕಾಪು ಮೂಳೂರಿನ ರಾಜೇಶ್ ಪೂಜಾರಿ(30), ಭಟ್ಕಳದ ಈಶ್ವರ ಗೊಂಡ(30), ಸಿದ್ಧಾಪುರ ಜನ್ಸಾಲೆಯ ಶೇಖರ ಶೆಟ್ಟಿ(56) ಎಂಬವರು ಬಂಧಿತ ಆರೋಪಿಗಳು. ಇವರಿಂದ 32700ರೂ. ನಗದು, 7 ಮೊಬೈಲ್, 3 ಪರ್ಸ್ ಹಾಗೂ ಒಂದು ಲೆಡ್ಜರ್ ಪುಸ್ತಕವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News