ಮಳೆಗೆ ಕೋಣಿ ಶಾಲೆಯ ಬಾವಿ ಕುಸಿತ

Update: 2019-06-24 16:48 GMT

ಉಡುಪಿ, ಜೂ.24: ಕುಂದಾಪುರ ತಾಲೂಕು ಕೋಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತೆರೆದ ಬಾವಿಯು ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಆವರಣ ಗೋಡೆ ಸಹಿತ ಕುಸಿದಿದ್ದು ಇದರಿಂದ ಸುಮಾರು ಒಂದುಲಕ್ಷ ರೂ.ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.

ರವಿವಾರ ಬೆಳಗ್ಗೆ ಶಾಲೆಯ ಪರಿಸರದ ನಿವಾಸಿಗಳು ಬಾವಿ ಕುಸಿದಿರುವುದನ್ನು ಗಮಿನಿಸಿ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಿದ್ದರು. ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಣಿ ಗ್ರಾಪಂ ಅಧ್ಯಕ್ಷ ಸಂಜೀವ ಮೊಗವೀರ ಹಾಗೂ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಶನಿವಾರ ರಾತ್ರಿ ಬಾವಿ ಕುಸಿದಿರುವುದರಿಂದ ಯಾವುದೇ ಅನಾಹುತ ನಡೆದಿಲ್ಲ. ಶಾಲೆಯ ಅಕ್ಷರ ದಾಸೋಹ ಕೊಠಡಿ, ಮುಖ್ಯ ಶಿಕ್ಷಕರ ಕೊಠಡಿ, ಸ್ಟೋರ್ ರೂಮಿನ ನಡುವೆ ಈ ಬಾವಿ ಇದ್ದು, ಇದರಿಂದ ಈ ಕಟ್ಟಡಗಳು ಅಪಾಯ ಎದುರಿಸುತ್ತಿವೆ.

ಇದರೊಂದಿಗೆ ವಡೇರಹೋಬಳಿಯ ಮಠದಬೆಟ್ಟು ಕೆರೆಯ ದಂಡೆಯ ಒಂದು ಭಾಗ ಸಹ ಶನಿವಾರ ರಾತ್ರಿ ಸುರಿದ ಮಳೆಗೆ ಸುರಿದು ಬಿದ್ದಿದೆ. ಕೆರೆಯ ಅಂಚಿನಲ್ಲಿರುವ ಮನೆಗಳವರು ಇದರಿಂದ ಆತಂಕಿತರಾಗಿದ್ದಾರೆ.

ಉಳಿದಂತೆ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಸತೀಶ್ ಅವರ ವಾಸ್ತವ್ಯದ ಮನೆಯು ಮಳೆಯಿಂದ ಭಾಗಶ: ಹಾನಿಯಾಗಿದ್ದು, 10,000ರೂ. ನಷ್ಟದ ಅಂದಾಜು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News