×
Ad

ಮನೆಯಿಂದ 22.5 ಲಕ್ಷ ರೂ.ಮೌಲ್ಯದ ಚಿನ್ನ, ಸೊತ್ತು ಕಳವು

Update: 2019-06-24 22:31 IST

ಮಂಗಳೂರು, ಜೂ. 24: ನಗರದ ಪದವಿನಂಗಡಿಯ ಗುರುನಗರದ ಡಾ.ಪಿ.ಕೆ.ಕಿರಣ್ ಕುಮಾರ್ ಅವರ ಮನೆಯಿಂದ 22.5 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಇತರ ಸೊತ್ತುಗಳು ಕಳವಾಗಿವೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಗಿಲು ಮುರಿದು ಕಳ್ಳತನ ನಡೆಸಲಾಗಿದೆ.

ಡಾ.ಕಿರಣ್‌ಕುಮಾರ್ ಅವರು ಪತ್ನಿ ಮತ್ತು ಮಕ್ಕಳ ಜತೆ ಕುಟುಂಬ ಸಮೇತ ಜೂ.19 ರಂದು ಮೇಘಾಲಯದ ಶಿಲಾಂಗ್‌ಗೆ ತೆರಳಿದ್ದು, ಜೂ.23ರಂದು ಸಂಜೆ ಹಿಂದಿರುಗಿ ಬಂದಾಗ ಕಳವಾಗಿರುವುದು ಬೆಳಕಿಗೆ ಬಂದಿದೆ.

ಕಳ್ಳರು ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಬೆಡ್‌ರೂಂನಲ್ಲಿದ್ದ ಕಪಾಟು ಮತ್ತು ಲಾಕರ್‌ನಿಂದ 20 ಲಕ್ಷ ರೂ. ವೌಲ್ಯದ ಚಿನ್ನಾಭರಣ, 2000 ಅಮೆರಿಕನ್ ಡಾಲರ್ (1.5 ಲಕ್ಷ ರೂ.) ಮತ್ತು 1 ಲಕ್ಷ ರೂ. ಬೆಲೆಯ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News