ವೀರಕಂಭ: "ಅಜ್ಜಿ ಕಥೆ" ಕಾರ್ಯಕ್ರಮ
ಬಂಟ್ವಾಳ, ಜೂ. 24: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಜಾನ್ಸಿರಾಣಿ ಜ್ಞಾನ ವಿಕಾಸ ಕೇಂದ್ರ ಆದಿಶಕ್ತಿ ಸಂಘದ ಸಂಯೋಜನೆಯಿಂದ "ಅಜ್ಜಿ ಕಥೆ" ಎಂಬ ಕಾರ್ಯಕ್ರಮವು ವೀರಕಂಭ ಗ್ರಾಮದ ಅಂಕದಡ್ಕ ಎಂಬಲ್ಲಿ ನಡೆಯಿತು.
ಆಧುನಿಕತೆಯ ಪರಿಣಾಮದಿಂದ ನಶಿಸಿ ಹೋಗುತ್ತಿರುವ ತುಳುನಾಡ ಸಂಸ್ಕೃತಿ ಮತ್ತೆ ಯುವಸಮೂಹಕ್ಕೆ ನೆನಪಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಹಿರಿಯರಾದ ಅಪ್ಪಿ ಅವರು ಅಜ್ಜಿ ಕಥೆ ಹೇಳುವ ಹಾಗೂ ಕೈ ತುತ್ತು ನೀಡುವ ಮೂಲಕ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಆದಿಶಕ್ತಿ ಸಂಘದ ರೇವತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಮೇಲ್ವಿಚಾರಕಿ ಪ್ರೇಮಾ, ಸಮನ್ವಯ ಅಧಿಕಾರಿ ನಳಿನಾಕ್ಷಿ, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ, ವೀರಕಂಬ ಕೂಟದ ಸೇವಾ ನಿರತೆ ರೇವತಿ ಉಪಸ್ಥಿತರಿದ್ದರು. ರೇಖಾ ಸ್ವಾಗತಿಸಿ, ರೇವತಿ ವಂದಿಸಿ, ದೇವಕಿ ಕಾರ್ಯಕ್ರಮ ನಿರೂಪಿಸಿದರು,