ಕುಕ್ಕಿಪಾಡಿ: ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ

Update: 2019-06-24 17:33 GMT

ಬಂಟ್ವಾಳ, ಜೂ. 24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆಯ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ವಲಯದ ಕುಕ್ಕಿಪಾಡಿಯಲ್ಲಿ ನೇಸರ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಕುಕ್ಕಿಪಾಡಿ ಶ್ರೀ ಸತ್ಯನಾರಾಯಣ ಭಜನ ಮಂಡಳಿ ವಠಾರದಲ್ಲಿ ಜರಗಿತು.
ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ. ಜ್ಞಾನ ವಿಕಾಸ ಕೇಂದ್ರವನ್ನು ಉದ್ಘಾಟಿಸಿ, ಜ್ಞಾನ ವಿಕಾಸ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿದರು.

ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಗೋಂಜ ಅಧ್ಯಕ್ಷತೆ ವಹಿಸಿದ್ದರು. ವಾಮದಪದವು ಸ.ಪ.ಪೂ. ಕಾಲೇಜು ಉಪನ್ಯಾಸಕಿ ಸಂಧ್ಯಾ ಅವರು ಮಹಿಳಾ ಸಬಲೀಕರಣ ಕುರಿತು ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಸಿದ್ದಕಟ್ಟೆ ವಲಯಾಧ್ಯಕ್ಷ ಸದಾನಂದ ಶೀತಲ ಅವರು ಶುಭಹಾರೈಸಿದರು. ಒಕ್ಕೂಟ ಅಧ್ಯಕ್ಷೆ ಸುಜಾತಾ, ನಿಕಟಪೂರ್ವ ಅಧ್ಯಕ್ಷೆ ಜಲಜಾಕ್ಷಿ, ಪ್ರಗತಿಪರ ಕೃಷಿಕ ಸದಾನಂದ ಶೆಟ್ಟಿ, ರಾಜು ಶೆಟ್ಟಿ, ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಪ್ನಾ, ಸೇವಾ ಪ್ರತಿನಿಧಿಗಳಾದ ಹೇಮಲತಾ, ತಾರಾನಾಥ್ ಉಪಸ್ಥಿತರಿದ್ದರು. 

ವಿದ್ಯಾ ಸ್ವಾಗತಿಸಿ, ಕುಸುಮಾ ವಂದಿಸಿದರು. ಭಾರತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News