ಪುಂಜಾಲಕಟ್ಟೆ: ಪರಿಸರ ಜಾಗೃತಿ, ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

Update: 2019-06-24 17:34 GMT

ಬಂಟ್ವಾಳ, ಜೂ. 24: ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ತಾಲೂಕು ಘಟಕ, ಪುಂಜಾಲಕಟ್ಟೆ ಪೊಲೀಸ್ ಠಾಣೆ, ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು, ಅರಣ್ಯ ಇಲಾಖೆ ವೇಣೂರು ವಲಯ ಇದರ ಸಹಯೋಗದಲ್ಲಿ  ಪರಿಸರ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ  ರವಿವಾರ ಪುಂಜಾಲಕಟ್ಟೆ ಪೊಲೀಸ್ ಠಾಣಾ  ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. 

ಬೆಳ್ತಂಗಡಿ ಪ್ರೊಬೆಶನರಿ ಡಿವೈಎಸ್‍ಪಿ ಗೋವಿಂದ ರಾಜ್ ಅವರು ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.  
ಪುಂಜಾಲಕಟ್ಟೆ ಪೊಲೀಸ್ ಠಾಣಾ ಉಪನಿರೀಕ್ಷಕಿ ಸೌಮ್ಯಾ ಜೆ. ಅವರು ಗಿಡಕ್ಕೆ ನೀರೆರೆದು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಗಿಡ ನೆಟ್ಟು ಅದನ್ನು ಪೋಷಿಸುವ ಹೊಣೆಗಾರಿಕೆ ನಡೆಸಬೇಕು. ಇಂತಹ ಉತ್ತಮ ಸಮಾಜಮುಖಿ ಕಾರ್ಯ ಅಭಿನಂದನೀಯ ಎಂದು ಹೇಳಿದರು. 

ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಕುಮಂಗಿಲ, ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ, ವಾಮದಪದವು ಘಟಕಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಎಡ್ತೂರು ಘಟಕದ ಅಧ್ಯಕ್ಷ ಗಣೇಶ್ ಶೆಟ್ಟಿ ನರ್ವಲ್ದಡ್ಡ, ಪುಂಜಾಲಕಟ್ಟೆ ಘಟಕಾಧ್ಯಕ್ಷ ಗಿರೀಶ್ ಮೂಲ್ಯ ಅನಿಲಡೆ, ವಾಮದಪದವು ಸೇ.ಸ. ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುಂಜಾಲಕಟ್ಟೆ ಘಟಕಾಧ್ಯಕ್ಷ ಚಂದ್ರಶೇಖರ ಶೆಟ್ಟಿ ವಾಮದಪದವು, ಉಳಿ ಗ್ರಾಪಂ ಸದಸ್ಯ ಚಿದಾನಂದ ರೈ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ರತ್ನದೇವ್ ಪುಂಜಾಲಕಟ್ಟೆ, ಪ್ರಮುಖರಾದ ದಿವಾಕರ ಶೆಟ್ಟಿ ಕಂಗಿತ್ತಿಲು, ರಾಜೇಂದ್ರ ಕೆ.ವಿ., ದಿನಕರ್ ಶೆಟ್ಟಿ ಅಂಕದಳ, ಜಯರಾಜ್ ಅತ್ತಾಜೆ, ದಿನೇಶ್ ಶೆಟ್ಟಿ ದಂಬೆದಾರು, ದಿನೇಶ್ ಶೆಟ್ಟಿ ಮಜಲೋಡಿ, ಸುರೇಶ್ ಶೆಟ್ಟಿ, ಪ್ರವೀಣ್ ಶೆಟ್ಟಿ ಕುರ್ಡುಮೆ, ಅಜಿತ್ ಶೆಟ್ಟಿ ಕಾರಿಂಜ, ಸತ್ಯಪ್ರಕಾಶ್ ಶೆಟ್ಟಿ, ಅಬೂಬಕರ್  ಹಾಗೂ ಪೊಲೀಸ್ ಠಾಣಾ ಸಿಬಂದಿ, ಮತ್ತಿತರರು ಭಾಗವಹಿಸಿದ್ದರು. 

ಸಸಿ ನೆಡುವ ಕಾರ್ಯಕ್ರಮ ಒಂದು ತಿಂಗಳ ಕಾಲ ನಡೆಯಲಿದ್ದು, ಆಯ್ದ ಸ್ಥಳಗಳಲ್ಲಿ ಉತ್ತಮ ಜಾತಿಯ ಸಸಿ ನೆಟ್ಟು ಅದರ ಪೋಷಣೆ ನಡೆಸಲಾಗುವುದು ಎಂದು ತು.ರ.ವೇ. ಬಂಟ್ವಾಳ ತಾ. ಅಧ್ಯಕ್ಷ ರಮೇಶ್ ಶೆಟ್ಟಿ ತಿಳಿಸಿದ್ದಾರೆ.

ಬಳಿಕ ಅರಣ್ಯ ಇಲಾಖೆ, ವೇಣೂರು ವಲಯದಿಂದ ಕೊಡಮಾಡಿದ ಉತ್ತಮ ಜಾತಿಯ ಸಸಿಗಳನ್ನು ವಿವಿಧ ಸ್ಥಳಗಳಲ್ಲಿ ನೆಡಲಾಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News