ಕೊಡಂಗೆ ಶಾಲೆ ಎಲ್‍ಕೆಜಿ ತರಗತಿ ಉದ್ಘಾಟನೆ

Update: 2019-06-24 17:36 GMT

ಬಂಟ್ವಾಳ, ಜೂ. 24: ಜಿಪಂ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೆ ಹಾಗೂ ಪರ್ಲಿಯ ಎಜುಕೇಷನಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಎಸ್‍ಡಿಎಂಸಿ ಕೊಡಂಗೆ ಇದರ ಸಹಕಾರದೊಂದಿಗೆ ಚಿಣ್ಣರ ಮನೆಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. 

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹಾಗೂ ಮಾಜಿ ಸಚಿವ ಬಿ. ರಮಾನಾಥ್ ರೈ ಜಂಟಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಟ್ರಸ್ಟಿನ ಅಧ್ಯಕ್ಷ ಜಾಕಿರ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. 

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಮಾತನಾಡಿ, ಶಾಲೆಗೆ ಬೇಕಾದ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ಟ್ರಸ್ಟಿನ ಸಂಚಾಲಕ ಸತ್ತಾರ್ ಪರ್ಲಿಯ, ಗೌರವಾಧ್ಯಕ್ಷ ಹಂಝ, ಎಸ್‍ಡಿಎಂಸಿ ಅಧ್ಯಕ್ಷ ಬಿ.ಎಂ. ಇಸ್ಮಾಯಿಲ್, ಜಮಾತ್ ಇಸ್ಲಾಂ ಬಿ.ಸಿ.ರೋಡ್ ವಲಯದ ಅಧ್ಯಕ್ಷ  ಶಾಹುಲ್ ಹಮೀದ್, ಪಿ. ಬಾವ., ಉದ್ಯಮಿ ವಾರಿಸ್, ಪರ್ಲಿಯಾ ನರ್ಸಿಂಗ್ ಹೋಮ್ ಮಾಲಕ ಇಮ್ರಾನ್ ಕೋಡಿ, ಎಸ್‍ಡಿಎಂಸಿ ಪ್ರೌಢ ಶಾಲೆಯ ಅಧ್ಯಕ್ಷ ಸುರೇಶ್ ಟೈಲರ್, ಅರಫಾ ಜುಮಾ ಮಸೀದಿ ಅಧ್ಯಕ್ಷ ಹಾಮದ್ ಬಾವ, ನೇಮಿರಾಜ್ ಶೆಟ್ಟಿ ಕೊಡಂಗೆ, ಕೊಡಂಗೆ ಶಾಲೆಯ ಮಾಜಿ ಮುಖ್ಯೋಪಾದ್ಯಾಯ ಸಲಾಂ ಮಾಸ್ಟರ್, ಪುರಸಭಾ ಸದಸ್ಯರಾದ ಮುಹಮ್ಮದ್ ನಂದರಬೆಟ್ಟು, ಗೋವಿಂದ ಪ್ರಭು, ಲುಕ್ಮಾನ್, ಮುಹಮ್ಮದ್ ಶರೀಫ್ ಉಪಸ್ಥಿತರಿದ್ದರು.

ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊಡಂಗೆ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ಆಯಿಷತುಲ್ ಅಫೀಫಾ ಅವರಿಗೆ ಟ್ರಸ್ಟಿನ ವತಿಯಿಂದ ಸನ್ಮಾನಿಸಲಾಯಿತು. 

ಕೊಡಂಗೆ ಪ್ರಾಥಮಿಕ ಶಾಲೆಯ ಶಿಕ್ಷಕಿ ವೀಣಾ ಪಿಂಟೋ ಸ್ವಾಗತಿಸಿದರು. ಪಿ.ಎ. ರಹೀಮ್ ಪ್ರಾಸ್ತಾವಿಸಿದರು. ಎಲ್‍ಕೆಜಿ ವಿಭಾಗದ ಮುಖ್ಯ ಶಿಕ್ಷಕಿ ರಮಣಿ ವಂದಿಸಿದರು. ಅಶ್ರಫ್ ಅರಬಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News