ಕಿಡಿಗೇಡಿಗಳಿಂದ ಕಟ್ಟಡಕ್ಕೆ ಬೆಂಕಿ: ನಷ್ಟ
Update: 2019-06-24 23:57 IST
ಉಡುಪಿ, ಜೂ.24: ನಗರದ ಕೆ.ಎಂ.ಮಾರ್ಗದಲ್ಲಿರುವ ಎಚ್.ವಿಜಯ ಕುಮಾರ್ ಎಂಬವರ ಕಟ್ಟಡದಲ್ಲಿರುವ ಉಡುಪಿ ಸ್ವೀಟ್ಸ್ ಅಂಗಡಿಯ ಹೊರ ಭಾಗದಲ್ಲಿ ಜೂ.23ರಂದು ಸಂಜೆ ವೇಳೆ ಕಿಡಿಗೇಡಿಗಳು ಬೆಂಕಿ ಕೊಟ್ಟ ಪರಿ ಣಾಮ ಅಪಾರ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಬೆಂಕಿಯಿಂದ ಕಟ್ಟಡದ ವಿದ್ಯುತ್ ಸ್ವೀಚ್ ಬೋರ್ಡ್, ಹೊಸತಾಗಿ ವಿದ್ಯುತ್ ಜೋಡಣೆಗೆ ಅಳವಡಿಸಿದ ಪೈಪ್ಗಳು ಹಾಗೂ ಹೊರಗಡೆ ನಿಲ್ಲಿಸಿದ್ದ ಸ್ಕೂಟರಿಗೆ ಬೆಂಕಿ ತಗುಲಿ ವಿಜಯ ಕುಮಾರ್ ಮಗ ಡಾ.ಚಂದ್ರಶೇಖರ ರಾವ್ ಎಂಬ ವರಿಗೆ ಸುಮಾರು 20ಸಾವಿರ ರೂ. ನಷ್ಟ ಉಂಟಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.