ಅಂದರ್ ಬಾಹರ್: 11 ಮಂದಿ ಬಂಧನ
Update: 2019-06-24 18:29 GMT
ಕೋಟ, ಜೂ.24: ಬೇಳೂರು ಗ್ರಾಮದ ಶಿಲೆ ಕಲ್ಲು ಕೋರೆ ಬಳಿ ಜೂ.23ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ 11 ಮಂದಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಗಣೇಶ್, ಸುದೀಪ್ ಶೆಟ್ಟಿ, ಮಹೇಶ್, ಮಣಿಕಂಠ, ಶಬರೀಶ, ಬಾಲಕೃಷ್ಣ, ಮಣಿಕಂಠ, ರಾಮಚಂದ್ರ, ರವಿ, ಗಣೇಶ್ ಮೊಗೇರ, ಸುರೇಶ್ ಎಂಬವರು ಬಂಧಿತ ಆರೋಪಿಗಳು. ಇವರಿಂದ 3090ರೂ. ನಗದು, 9 ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.