ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ 285/7

Update: 2019-06-25 13:12 GMT

 ಲಂಡನ್, ಜೂ.25:ನಾಯಕ ಆ್ಯರೊನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ನೀಡಿದ ಭರ್ಜರಿ ಆರಂಭದ ಹೊರತಾಗಿಯೂ ಆತಿಥೇಯ ಇಂಗ್ಲೆಂಡ್ ತಂಡ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು 50 ಓವರ್‌ಗಳಲ್ಲಿ 7 ವಿಕೆಟ್‌ಗೆ 285 ರನ್‌ಗೆ ನಿಯಂತ್ರಿಸಿದೆ.

ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಇನಿಂಗ್ಸ್ ಆರಂಭಿಸಿದ ಫಿಂಚ್ ಹಾಗೂ ವಾರ್ನರ್ ಮೊದಲ ವಿಕೆಟ್‌ಗೆ 123 ರನ್ ಜೊತೆಯಾಟ ನಡೆಸಿ ಆಸೀಸ್‌ಗೆ ಉತ್ತಮ ಆರಂಭ ಒದಗಿಸಿದರು. 23ನೇ ಓವರ್‌ನಲ್ಲಿ ಮೊಯಿನ್ ಅಲಿ ಈ ಜೋಡಿಯನ್ನು ಬೇರ್ಪಡಿಸಿದರು.

  53 ರನ್(61 ಎಸೆತ, 6ಬೌಂಡರಿ)ಗಳಿಸಿದ ವಾರ್ನರ್ ಸ್ಪಿನ್ನರ್ ಅಲಿಗೆ ವಿಕೆಟ್ ಒಪ್ಪಿಸಿದರು.

 ಫಿಂಚ್ 115 ಎಸೆತಗಳಲ್ಲಿ ವಿಶ್ವಕಪ್‌ನಲ್ಲಿ ಮತ್ತೊಂದು ಶತಕ ಸಿಡಿಸಿದರು. ಆದರೆ, ಅವರು ಶತಕ ಸಿಡಿಸಿದ ತಕ್ಷಣ ಅರ್ಚರ್‌ಗೆ ವಿಕೆಟ್ ಒಪ್ಪಿಸಿದರು. 116 ಎಸೆತಗಳ ಇನಿಂಗ್ಸ್‌ನಲ್ಲಿ ಫಿಂಚ್ 11ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು.

ಫಿಂಚ್ ಹಾಗೂ ವಾರ್ನರ್ ಹಾಕಿಕೊಟ್ಟ ಉತ್ತಮ ಬುನಾದಿಯಲ್ಲಿ ರನ್ ಶಿಖರ ಕಟ್ಟಲು ಆಸೀಸ್ ವಿಫಲವಾಯಿತು. ಮಾಜಿ ನಾಯಕ ಸ್ಟೀವನ್ ಸ್ಮಿತ್(38), ಅಲೆಕ್ಸ್ ಕಾರೆ(ಔಟಾಗದೆ 38) ಉಸ್ಮಾನ್ ಖ್ವಾಜಾ(23) ಹಾಗೂ ಮ್ಯಾಕ್ಸ್‌ವೆಲ್(12)ರನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ಇಂಗ್ಲೆಂಡ್ ಬೌಲರ್‌ಗಳು ಯಶಸ್ವಿಯಾದರು.

ಇಂಗ್ಲೆಂಡ್‌ನ ಪರ ಕ್ರಿಸ್ ವೋಕ್ಸ್(2-46) ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News