ದೇಶದ ಅಭಿವೃದ್ಧಿಯಲ್ಲಿ ಸಿಎಗಳ ಪಾತ್ರ ಮಹತ್ವದ್ದು: ರಘುಪತಿ ಭಟ್

Update: 2019-06-25 13:28 GMT

ಮಣಿಪಾಲ, ಜೂ.25: ಭಾರತ ದೇಶದ ಆರ್ಥಿಕತೆ ಅಭಿವೃದ್ಧಿಯಲ್ಲಿ ಲೆಕ್ಕ ಪರಿಶೋಧಕರ ಪಾತ್ರ ಮಹತ್ವದಾಗಿದೆ. ಇಂದಿನ ದಿನಗಳಲ್ಲಿ ವ್ಯವಹಾರವು ಸಂಪೂರ್ಣ ಆನ್‌ಲೈನ್ ಮತ್ತು ಜಿಎಸ್‌ಟಿ ಪದ್ದತಿಯಲ್ಲಿ ಹೊಸದಾದ ಕಾನೂನು ಪರಿಪಾಲನೆ ಜೊತೆಯಲ್ಲಿ ತೆರಿಗೆ ಹಣವನ್ನು ಸಕಾಲದಲ್ಲಿ ಪಾವತಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಲೆಕ್ಕಪರಿಶೋಧಕರ ಮೇಲಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಮಣಿಪಾಲದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಜರಗಿದ ಲೆಕ್ಕಪರಿಶೋಧನೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಎಸ್‌ಐಆರ್‌ಸಿ ಅಧ್ಯಕ್ಷ ಸಿಎ ಜೋಮ್ನ್ ಜಾರ್ಜ್, ಸೆಂಟ್ರಲ್ ಕಮಿಟಿ ಸದಸ್ಯರಾದ ಸಿಎ ಶೇಖರ್, ಸಿಎ ಜಯರಾಮ್ ಮತ್ತು ಚೆನ್ನೈಯ ಪ್ರಾದೇಶಿಕ ಮುಖ್ಯಸ್ಥ ಸಿಎ ಗಿರಿಧರ  ನ್ ಕಾರ್ಯಾಗಾರ ನಡೆಸಿಕೊಟ್ಟರು.

ಗುಜ್ಜಾಡಿ ಪ್ರಭಾಕರ್ ನಾಯಕ್, ಪ್ರದೀಪ್ ಜೋಗಿ ಉಪಸ್ಥಿತರಿದ್ದರು. ಲೆಕ್ಕ ಪರಿಶೋದಕರ ಸಂಘದ ಅಧ್ಯಕ್ಷ ಸಿಎ ನರಸಿಂಹ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಕವಿತಾ ಪೈ ವಂದಿಸಿದರು. ಸೌಮ್ಯ ಕಿಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News