ರೋಟರಿ ಕ್ಲಬ್ ಬಂಟ್ವಾಳ ಟೌನ್: ಜೂ.30ರಂದು ನೂತನ ಪದಾಧಿಕಾರಿಗಳ ಪದಗ್ರಹಣ

Update: 2019-06-25 13:53 GMT
ಜಯರಾಜ್

ಬಂಟ್ವಾಳ, ಜೂ. 25: ರೋಟರಿ ಕ್ಲಬ್ ಬಂಟ್ವಾಳ ಟೌನ್‍ನ 2019-20ರ ಸಾಲಿನ ನಿಯೋಜಿತ ಅಧ್ಯಕ್ಷ ಜಯರಾಜ್ ಎಸ್. ಬಂಗೇರ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂ. 30ರಂದು ಸಂಜೆ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಉಮೇಶ್ ನಿರ್ಮಲ್ ತಿಳಿಸಿದ್ದಾರೆ.

ಮಂಗಳವಾರ ಬಂಟ್ವಾಳ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೋಟರಿ ಜಿಲ್ಲೆ 3181ರ ಪೂರ್ವ ಜಿಲ್ಲಾ ಗವರ್ನರ್ ಡಾ.ಆರ್.ಎಸ್. ನಾಗರಾಜ್ ಪದಗ್ರಹಣವನ್ನು ನೆರವೇರಿಸಲಿದ್ದು, ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್, 2019-20 ರ ಸಾಲಿನ ನಿಯೋಜಿತ ಗವರ್ನರ್ ರಿತೇಶ್ ಬಾಳಿಗಾ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯಾ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ರೋಟೆರಿಯನ್‍ಗಳಾದ ಕಾರ್ಯದರ್ಶಿಯಾಗಿ ಪಲ್ಲವಿ ಕಾರಂತ, ಉಪಾಧ್ಯಕ್ಷರಾಗಿ ಶಾಂತರಾಜ್, ಖಜಾಂಚಿಯಾಗಿ ಕಿಶೋರ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್, ಕ್ಲಬ್ ಸರ್ವಿಸಸ್ ಡೈರೆಕ್ಟರ್ ಆಗಿ ಪದ್ಮನಾಭ ರೈ, ಸಮುದಾಯ ಸೇವೆ ಡೈರೆಕ್ಟರ್ ಆಗಿ ವಿದ್ಯಾ .ಸಿ, ವೃತ್ತಿಸೇವೆ ಡೈರೆಕ್ಟೆರ್ ಆಗಿ ಸ್ಟೀವನ್ ಡಿಸೋಜ , ಅಂತರಾಷ್ಟ್ರೀಯ ಡೈರೆಕ್ಟರ್ ಆಗಿ ಆದಮ್ ಸಲಾಂ, ಯುವ ಜನಸೇವೆ ಡೈರೆಕ್ಟರ್ ಆಗಿ ಶನಫತ್ ಶರೀಷ್, ಟಿಆರ್‍ಎಫ್ ಚೆಯರ್‍ಮೆನ್ ಆಗಿ ಶಂಕರ್ ಶೆಟ್ಟಿ, ಮೆಂಬರ್ ಶಿಪೊ ಚೆಯರ್‍ಮೆನ್ ಸುಧಾಕರ ಸಾಲ್ಯಾನ್, ಪಲ್ಸ್ ಪೊಲೀಯೋ ಚೆಯರ್‍ಮೆನ್ ಆಗಿ ಡಾ.ಸಂತೋಷ್ ಆಯ್ಕೆಯಾಗಿದ್ದಾರೆ ಎಂದು ವಿವರಿಸಿದರು.

ತನ್ನ ಅವಧಿಯಲ್ಲಿ ಸ್ಫೂರ್ತಿ ಜಿಲ್ಲಾ ಯೋಜನೆಯಡಿ 13 ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲಾಗಿದೆ.ಪ್ರಸ್ತುತ ಸಾಲಿನಲ್ಲಿ"ಜೀವನ ಸಂಧ್ಯಾ"ಯೋಜನೆಯಲ್ಲಿ ವೃದ್ಧಾಶ್ರಮಗಳಿಗೆ ಸವಲತ್ತುಗಳನ್ನು ನೀಡುವುದರ ಜೊತೆಗೆ ಅವರೊಂದಿಗೆ ಬೆರತೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆಯಲ್ಲದೆ ಇನ್ನು ಕೆಲ ಜನಪರವಾದ ಸೇವೆಯನ್ನು ನೀಡಲು ಉದೇಶಿಸಲಾಗಿದೆ ಎಂದು ಅಧ್ಯಕ್ಷ ಉಮೇಶ್ ನಿರ್ಮಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಿಯೋಜಿತ ಅಧ್ಯಕ್ಷ ಜಯರಾಜ್ ಎಸ್.ಬಂಗೇರ, ಕಾರ್ಯದರ್ಶಿಪಲ್ಲವಿ ಕಾರಂತ, ರೋ.ಗಳಾದ ರಿತೇಶ್ ಬಾಳಿಗಾ, ಸುರೇಶ್ ಸಾಲ್ಯಾನ್, ನಾರಾಯಣ ಹೆಗ್ಡೆ ಮೊದಲಾದವರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News