ಗುಜರಾತ್ ಕಾಂಗ್ರೆಸ್ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2019-06-25 14:31 GMT

ಹೊಸದಿಲ್ಲಿ, ಜೂ. 25: ಗುಜರಾತ್ ರಾಜ್ಯ ಸಭೆಯ ಎರಡು ಸ್ಥಾನಗಳಿಗೆ ಪ್ರತ್ಯೇಕ ಉಪ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಗುಜರಾತ್ ಕಾಂಗ್ರೆಸ್ ಸಲ್ಲಿಸಿದ ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

ಆದರೆ, ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ಸ್ಮತಿ ಇರಾನಿಯವರಿಂದ ತೆರವಾದ ಎರಡು ಲೋಕಸಭಾ ಸ್ಥಾನಗಳಿಗೆ ಚುನಾವಣೆ ಮುಗಿದ ಬಳಿಕ ‘ಚುನಾವಣಾ ತಕರಾರು’ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯವನ್ನು ಗುಜರಾತ್ ಕಾಂಗ್ರೆಸ್‌ಗೆ ನ್ಯಾಯಮೂರ್ತಿ ಗಳಾದ ಸಂಜೀವ್ ಖನ್ನಾ ಹಾಗೂ ಬಿ.ಆರ್. ಗವಾಯಿ ಅವರನ್ನು ಒಳಗೊಂಡ ರಜಾಕಾಲದ ಪೀಠ ಅವಕಾಶ ನೀಡಿದೆ.

ಸಂಸತ್, ವಿಧಾನ ಸಭೆ ಅಥವಾ ಸ್ಥಳೀಯಾಡಳಿತದ ಚುನಾವಣೆ ಫಲಿತಾಂಶ ಪ್ರಶ್ನಿಸುವ ಕಾರ್ಯ ವಿಧಾನವೇ ಚುನಾವಣಾ ತಕರಾರು ಅರ್ಜಿ. ಗುಜರಾತ್‌ನ ಗಾಂಧಿನಗರ ಹಾಗೂ ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಿಂದ ಕ್ರಮವಾಗಿ ಶಾ ಹಾಗೂ ಇರಾನಿ ಆಯ್ಕೆಯಾದ ಬಳಿಕ ರಾಜ್ಯ ಸಭೆಯ ಎರಡು ಸ್ಥಾನಗಳು ಖಾಲಿಯಾಗಿತ್ತು. ಗುಜರಾತ್ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕ ಪರೇಶ್‌ಭಾ ಸುಪ್ರೀಂ ಕೋರ್ಟ್‌ನಲ್ಲಿ ಈ ಮನವಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News