ಯಕ್ಷಗಾನ ತರಬೇತಿಗೆ ಅರ್ಜಿ ಆಹ್ವಾನ

Update: 2019-06-25 15:54 GMT

ಉಡುಪಿ, ಜೂ.25: ಕರ್ನಾಟಕ ಯಕ್ಷಗಾನ ಅಕಾಡೆಮಿಯು 2019-20ನೇ ಸಾಲಿನಲ್ಲಿ ಸಾಮಾನ್ಯ ಯೋಜನೆಯಡಿ 2 ತಿಂಗಳ ಯಕ್ಷಗಾನ ತರಬೇತಿಗೆ (ತೆಂಕುತಿಟ್ಟು, ಬಡಗುತಿಟ್ಟು, ಬಡಾಬಡಗುತಿಟ್ಟು) ಕಲಾವಿದರಿಂದ/ಕಲಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಯಕ್ಷಗಾನ ತರಬೇತಿಯನ್ನು ಕನಿಷ್ಟ 10 ಮಂದಿಗೆ ನೀಡಬಯಸುವ ಆಸಕ್ತ ಕಲಾವಿದರು/ ಕಲಾ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ. 2018-19ನೇ ಸಾಲಿನಲ್ಲಿ ಯಕ್ಷಗಾನ ತರಬೇತಿಗೆ ಅವಕಾಶ ಪಡೆದ ಕಲಾಸಂಸ್ಥೆ/ ಕಲಾವಿದರಿಗೆ ಮತ್ತೆ ಅವಕಾಶವಿರುವುದಿಲ್ಲ.

ಯಕ್ಷಗಾನ ತರಬೇತಿ ನೀಡಬಯಸುವ ಆಸಕ್ತ ಕಲಾವಿದರು/ ಕಲಾಸಂಸ್ಥೆಗಳು ತಮ್ಮ ಮನವಿಯನ್ನು ಜು.15ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಬೆಂಗಳೂರು ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂಖ್ಯೆ: 080-22113146ನ್ನು ಸಂಪರ್ಕಿಸುವಂತೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News