ಬಿಜೈ ಹಾಸ್ಟೆಲ್ ಎದುರು ಅಪರಿಚಿತ ಶವ ಪತ್ತೆ

Update: 2019-06-25 16:35 GMT

ಮಂಗಳೂರು, ಜೂ.25: ನಗರದ ಬಿಜೈನ ಹಾಸ್ಟೆಲ್‌ವೊಂದರ ಎದುರುಗಡೆ ಅಪರಿಚಿತ ವ್ಯಕ್ತಿಯ ಶವ ರವಿವಾರ ಪತ್ತೆಯಾಗಿದೆ.
ಮೃತ ವ್ಯಕ್ತಿಗೆ ಸುಮಾರು 40ರಿಂದ 45ವರ್ಷದ ವಯಸ್ಸಾಗಿದ್ದು, ಯಾವುದೋ ಕಾಯಿಲೆಯಿಂದ ಅಸೌಖ್ಯಗೊಂಡು ಮೃತಪಟ್ಟಿರಬಹುದಾಗಿದೆ ಎಂದು ತಿಳಿದುಬಂದಿದೆ. ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಚಹರೆ: 5.3 ಇಂಚು ಎತ್ತರ, ಅರೆನೆರೆದ ಕೂದಲು, ಕೋಲು ಮುಖ, ಸಾಧಾರಣ ಶರೀರ, ಗೋಧಿ ಮೈಬಣ್ಣ, ನೇರಳೆ ಬಣ್ಣದ ಕೆಂಪು ಮತ್ತು ಕಪ್ಪು ಗೆರೆಗಳಿರುವ ಉದ್ದ ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್, ಬೂದು ಬಣ್ಣದ ಬರ್ಮುಡಾ ಚಡ್ಡಿ ಧರಿಸಿದ್ದಾರೆ.

ಮೃತವ್ಯಕ್ತಿಯು ವಾರಸುದಾರರಿದ್ದಲ್ಲಿ ಉರ್ವ ಪೊಲೀಸ್ ಠಾಣೆ ಅಥವಾ ನಗರ ನಿಯಂತ್ರಣ ಕೊಠಡಿ ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News