ರಕ್ಷಕ ಶಿಕ್ಷಕ ವಿದ್ಯಾರ್ಥಿ ಸಮಾವೇಶ

Update: 2019-06-25 17:25 GMT

ಉಳ್ಳಾಲ: ಪ್ರತೀಯೋರ್ವ ವಿದ್ಯಾರ್ಥಿಯಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣ ಕಾರ್ಯದಲ್ಲಿ ರಕ್ಷಕರ ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ಇದರ  ಸಲಹೆಗಾರ ರಫೀಕ್ ಮಾಸ್ಟರ್ ಅಭಿಪ್ರಾಯಪಟ್ಟರು. 

ಮದನಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ರಕ್ಷಕ ಶಿಕ್ಷಕ ವಿದ್ಯಾರ್ಥಿ ಸಮಾವೇಶ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ರಕ್ಷಕ ಶಿಕ್ಷಕರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿ ಇದರ ಪೂರ್ಣ ಪ್ರಮಾಣದ ಯಶಸ್ಸಿಗೆ ಶಾಲಾ ಪರಿಸರ ಹಾಗೂ ಮನೆಯ ವಾತಾವರಣ ಪೂರಕ ವೇದಿಕೆಯಾಗಬೇಕು ಎಂದ ಅವರು ವಿದ್ಯಾರ್ಥಿಗಳ ಸತತವಾದ ಕಠಿಣ ಪರಿಶ್ರಮದಿಂದ ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಇಂದಿನ ಮಹಾನ ನಾಯಕರಂತಹ ವಿಶೇಷ ಪ್ರತಿಭೆಗಳಾಗಲು ಸಾಧ್ಯವಾಗುವುದು ಜೊತೆಗೆ ಉತ್ತಮ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳೂ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಅಂಶಗಳು ಎಂದರು.

ವಿದ್ಯಾರ್ಥಿಸಂಘ, ಎನ್.ಎಸ್.ಎಸ್, ಕ್ರೀಡಾ ಸಂಘ ಹಾಗೂ ಸಾಹಿತ್ಯ ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ರಾಜೇಶ್ ನೆರವೇರಿಸಿ ಮಾತನಾಡಿ ಪಠ್ಯೇತರ ಸಂಘಗಳು ವಿದ್ಯಾರ್ಥಿ ಬದುಕಿನ ಜೀವನಾಡಿಯಾಗಿದ್ದು ಮುಂದಿನ ಸಂತೃಪ್ತ ಬದುಕಿಗೆ ನೆರವಾಗುತ್ತದೆ ಎಂದರು.ಆಡಳಿತ ಮಂಡಳಿಯ ಕಾರ್ಯದರ್ಶಿ ಪಂಡಿತ್ ಮುಹಮ್ಮದ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ವಿವಿಧ ಸಂಘಗಳ ಚುನಾಯಿತ ಪ್ರತಿನಿ„ಗಳ ಪ್ರತಿಜ್ಞಾ ಕಾರ್ಯವನ್ನು ಶಾರೀರಿಕ ಶಿಕ್ಷಣ ಶಿಕ್ಷಕರಾದ ಅಶ್ರಫ್ ನೆರವೇರಿಸಿದರು. 

ಪ್ರಾಂಶುಪಾಲ ಇಸ್ಮಾಯಿಲ್.ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾಲೇಜು ವಿಭಾಗದ ಸಂಚಾಲಕ ಯು.ಎನ್ ಇಬ್ರಾಹಿಂ, ಇತಿಹಾಸ ವಿಭಾಗದ ಮೆಟಿಲ್ಡಾ ಕ್ರಾಸ್ತ, ಆಂಗ್ಲ ಭಾಷಾ ವಿಭಾಗದ ನಸೀರ, ಅರ್ಥಶಾಸ್ತ್ರ ಉಪನ್ಯಾಸಕ  ಅಬ್ದುಲ್ ಅಝೀಝ್, ಹಿಂದಿ ಉಪನ್ಯಾಸಕಿ ಸುರೇಖ ಉಪಸ್ಥಿತರಿದ್ದರು.

ರಾಜ್ಯಶಾಸ್ತ್ರ ಉಪನ್ಯಾಸಕ ಹಬೀಬ್ ರಹಿಮಾನ್ ಸ್ವಾಗತಿಸಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಮುಹಮ್ಮದ್ ಫಾಝಿಲ್ ವಂದಿಸಿದರು. ಸಾಹಿತ್ಯ ಸಂಘದ ಕಾರ್ಯದರ್ಶಿ ಶಮೀರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News