ಅಕ್ರಮ ಗೋಸಾಗಾಟದ ವಿರುದ್ಧ ಕಠಿಣ ಕ್ರಮಕ್ಕೆ ವಿಹಿಂಪ, ಬಜರಂಗದಳ ಆಗ್ರಹ

Update: 2019-06-25 17:33 GMT

ಮೂಡುಬಿದಿರೆ: ಇತ್ತೀಚೆಗೆ ಧರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ ಗೋ ಸಾಗಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಟನೆಯ ಕಾರ್ಯಕರ್ತ ಸಮಿತ್‍ರಾಜ್ ಧರೆಗುಡ್ಡೆ ಅವರು ಪೊಲೀಸ್ ಉಪನಿರೀಕ್ಷಕರು ಆರೋಪಿಗಳ ಕಡೆಯಿಂದ ಹಣ ಪಡೆದುಕೊಂಡಿದ್ದಾರೆ ಎಂದು ಹೇಳಿರುವ ಆಡಿಯೋ ವೈರಲ್ ಆಗುತ್ತಿದೆ. ನಮಗೆ ಪೊಲೀಸ್ ಇಲಾಖೆಯ ಬಗ್ಗೆ ಗೌರವವಿದ್ದು, ಕಾರ್ಯಕರ್ತರು ಇಂತಹ ಗೊಂದಲದ ಹೇಳಿಕೆ ನೀಡಬಾರದು, ತಾಲೂಕಿನ ಕೆಲವೆಡೆ ಅಕ್ರಮ ಗೋಸಾಗಾಟಗಳು ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೂಡುಬಿದಿರೆ ಪ್ರಖಂಡ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೂಚಿಸಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ವಿಹಿಂಪ ಕಾರ್ಯಾಧ್ಯಕ್ಷ ಕೆ.ಶ್ಯಾಮ್ ಹೆಗ್ಡೆ ಕೆಲ್ಲಪುತ್ತಿಗೆ ಪ್ರಕರಣದಲ್ಲಿ ಗೋಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಬಜರಂಗದಳ ಕಾರ್ಯಕರ್ತರು ಎಂದು ಬಿಂಬಿಸಲಾಗಿದೆ. ಅಸಲಿಗೆ ಆತ ನಮ್ಮ ಸಂಘಟನೆಯ ಕಾರ್ಯಕರ್ತನಲ್ಲ. ಆತ ಕಾಂಗ್ರೆಸ್ ಮುಖಂಡ ಎಂದು ಸ್ಪಷ್ಟೀಕರಣ ನೀಡಿರುವುದಲ್ಲದೆ ಪತ್ರಿಕಾ ವರದಿಗಳಲ್ಲಿ ಬಜರಂಗದಳದ ಕಾರ್ಯಕರ್ತನೆಂದು ಬಿಂಬಿಸಿರುವುದನ್ನು ಸಂಘಟನೆ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಜರಂಗದಳ ತಾಲೂಕು ಸಂಚಾಲಕ ಸುಚೇತನ್ ಜೈನ್ ಸಹ ಸಂಚಾಲಕ ಅಭಿಲಾಷ್ ಅರ್ಜುನಾಪುರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News