ಬನ್ನೂರು: ಸ್ವಚ್ಚಮೇವ ಜಯತೇ ಕಾರ್ಯಕ್ರಮ

Update: 2019-06-25 17:35 GMT

ಪುತ್ತೂರು: ಸ್ವಚ್ಛಮೇವ ಜಯತೇ ಮತ್ತು ನಮ್ಮ ಗ್ರಾಮ ಹಸಿರು ಗ್ರಾಮ ಕಾರ್ಯಕ್ರಮ ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಜೆ ಬೇರಿಕೆ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಗ್ರಾಮ ಪಂಚಾಯತ್ ಅದ್ಯಕ್ಷೆ ರಮಣಿ ಡಿ. ಗಾಣಿಗ ಉಪಸ್ಥಿತಿಯಲ್ಲಿ ನಡೆಯಿತು.

ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅಂಗನವಾಡಿ ಪುಟಾಣಿಗಳಿಗೆ ಗಿಡ ವಿತರಿಸಿ ಮಕ್ಕಳೊಂದಿಗೆ ಮಾತನಾಡಿದ ಅವರು ಗಿಡ, ಮರ ಮತ್ತು ಪರಿಸರದ ಕುರಿತು ಮಕ್ಕಳಲ್ಲಿ ಆಸಕ್ತಿ ಹುಟ್ಟಬೇಕು ಎಂದರು.  

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾದ್ಯಕ್ಷ ಜಿನ್ನಪ್ಪ ಗೌಡ, ಸದಸ್ಯರಾದ ಅಣ್ಣಿ ಪೂಜಾರಿ, ಚಿಗುರು ಗೆಳೆಯರ ಬಳಗದ ಸದಸ್ಯ ಸಂತೋಷ್ ಕುಮಾರ್, ದಾಮೋದರ್ ಅಚಾರ್ಯ, ಕೃಷಿಕ ರಾಮ್ ಪ್ರಸಾದ್ ಮಯ್ಯ, ಬಾಲ ವಿಕಾಸ ಸಮಿತಿಯ ಅದ್ಯಕ್ಷೆ ಮಮತ ಎಸ್., ಸೂರಜ್ ಗೊಳ್ತಿಲ, ರಾಜೇಶ್ ಗೊಳ್ತಿಲ, ಅಂಗನವಾಡಿ ಕಾರ್ಯಕರ್ತೆ ರೇಖಾ ಡಿ.ಎಸ್. ಸಹಾಯಕಿ ಮಾಲತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News