×
Ad

ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ: ಶಾಲಾ ಮುಖ್ಯಮಂತ್ರಿಯಾಗಿ ಗೌತಮ್ ಆಯ್ಕೆ

Update: 2019-06-25 23:11 IST

ಬಂಟ್ವಾಳ, ಜೂ. 25: ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ
ಶಾಲಾ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಇನ್ನಿತರ ಸಚಿವ ಸ್ಥಾನಕ್ಕೆ ಮಂಗಳವಾರ ಮತದಾನ ನಡೆಯಿತು. ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ತಮ್ಮ ಮೆಚ್ಚಿನ ಅಭ್ಯರ್ಥಿಗೆ ಮತದಾನ ಮಾಡಿದರು. ಶೇ.94 ಮತದಾನ ಚಲಾವಣೆಯಾಯಿತು.

ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆದ ಶಾಲಾ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಮತ ಚಲಾಯಿಸಿ ಸಂಭ್ರಮಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಹಿತೇಶ್ ಕುಮಾರ್, ಗಗನ್ ಕೆ. ಪ್ರಣೀತ್, ಗೌತಮ್ ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಸ್ವಸ್ತಿಕ್, ಪ್ರಥಮ್, ರಕ್ಷಣ್, ಚಿರಾಗ್ ಸ್ಪರ್ಧಿಸಿದ್ದರು. 5 ರಿಂದ 8ನೇ ತರಗತಿವರೆಗಿನ 145 ಮಂದಿ ವಿದ್ಯಾರ್ಥಿಗಳು ಮತ ಚಲಾಯಿಸಿದರು.

ಬಳಿಕ ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು ಗೌತಮ್ 93 ಮತಗಳನ್ನು ಪಡೆದು ಶಾಲಾ ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ ಚಿರಾಗ್ 72 ಮತ ಪಡೆದು ಉಪಮುಖ್ಯಯಾಗಿ ಆಯ್ಕೆಯಾದರು. ಪರಾಭವಗೊಂಡ ಅಭ್ಯರ್ಥಿಗಳು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಗೊಂಡರು. ನೂತನ ಮುಖ್ಯಮಂತ್ರ, ಉಪಮುಖ್ಯಮಂತ್ರಿ ಹಾಗೂ ಇತರ ಸಚಿವರ ಪ್ರಮಾಣ ವಚನ ಶುಕ್ರವಾರ ನಡೆಯಲಿದೆ. ಸಹಶಿಕ್ಷಕಿಯರಾದ ಹಿಲ್ಡಾ ಫೆರ್ನಾಂಡೀಸ್, ಅನಿತಾ, ಭಾಗ್ಯಲಕ್ಷ್ಮೀ, ವೇದಾವತಿ ಅಶ್ವಿನಿ  ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News