​ಜುಲೈ 7ರಂದು ಉಜಿರೆಯಲ್ಲಿ ಹಲಸು ಹಬ್ಬ

Update: 2019-06-25 17:50 GMT

ಬೆಳ್ತಂಗಡಿ : ‘ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಅಂಗ ಸಂಸ್ಥೆಗಳ ವತಿಯಿಂದ ಜುಲೈ 7ರಂದು ಉಜಿರೆ ರಾಮಕೃಷ್ಣ ಸಭಾಭವನ ಹಾಗೂ ಶಾರದಾ ಮಂಟಪದಲ್ಲಿ ತಾಲೂಕಿನಲ್ಲೇ ಪ್ರಥಮ ಬಾರಿಗೆ ‘ಹಲಸು ಹಬ್ಬ’ವನ್ನು ಮುಳಿಯ ಪ್ರತಿಷ್ಠಾನ ಪುತ್ತೂರು, ಎಸ್‍ಕೆಡಿಆರ್‍ಡಿಪಿ, ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಉಜಿರೆ ಎಸ್‍ಡಿಎಂ ಕಾಲೇಜು ಎನ್‍ಎಸ್‍ಎಸ್ ಘಟಕ, ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘ, ಧರಿತ್ರಿ ಸಾವಯವ ಕೃಷಿಕರ ಸಂಘ ಕನ್ಯಾಡಿ ಮುಂತಾದ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ’ ಎಂದು ರೋಟರಿ ಕ್ಲಬ್ ಅಧ್ಯಕ್ಷ ಜಗಧೀಶ್ ಪ್ರಸಾದ್ ಹೇಳಿದರು.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಯಾಗಲಿದ್ದು, 10.30ರಿಂದ ವಿವಿಧ ಗೋಷ್ಠಿಗಳು ನಡೆಯಲಿದೆ. 4 ಗೋಷ್ಠಿಗಳು ನಡೆಯಲಿದ್ದು  ‘ಜಾಗತಿಕ ಮಟ್ಟದಲ್ಲಿ ಹಲಸು’ ಎಂಬ ವಿಷಯದಲ್ಲಿ ಶ್ರೀಪಡ್ರೆ,  ‘ತಳಿ ಆಯ್ಕೆ ಮತ್ತು ಪೋಷಣೆ’ ವಿಷಯದಲ್ಲಿ ಪೆರ್ಲ ಪ್ರಗತಿಪರ ಕೃಷಿಕ  ಶಿವಪ್ರಸಾದ್ ವರ್ಮುಡಿ, ಕಾಸರಗೋಡಿನ ಕಸಿ ತಜ್ಞ ಗುರುರಾಜ ಬಾಳ್ತಿಲ್ಲಾಯ, ಅತ್ರಾಡಿ ಉಡುಪಿಯ ಅನಿಲ್ ಭಟ್ ಬಳಂಜ,  ‘ಮೌಲ್ಯವರ್ಧನೆ ಮತ್ತು ಮಾರುಕಟ್ಟೆ’ ವಿಷಯದಲ್ಲಿ ಚಿಕ್ಕಮಗಳೂರು ಸಕ್ಕರಾಯಪಟ್ಟಣ ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಶಿವಣ್ಣ, ಆದರ್ಶ ಸುಬ್ರಾಯ ಕೈಲಾರು ಇಳಂತಿಲ, ಕಾರ್ಕಳ ಮಾಲದ ಹರೀಶ್ ಚಂದ್ರ ತೆಂಡೂಲ್ಕರ್, ತೋಟತ್ತಾಡಿ ಮೆಟ್ರೋ ಚಿಪ್ಸ್‍ನ ಜೂಲಿ ಜೋಸ್, ಪುತ್ತೂರಿನ ಸುಹಾಸ್ ಮರಿಕೆ, ಬಂಟ್ವಾಳದ ಸಾವಯವ ಕೃಷಿಕ ಯತೀಶ್ ಬೊಂಡಾಲ,  ‘ಸಾವಯವ ಹಲಸು - ಆರೋಗ್ಯ, ಪಶು ಆಹಾರವಾಗಿ ಹಲಸು’ ವಿಷಯದಲ್ಲಿ ಡಾ. ಪ್ರದೀಪ್ ನಾವೂರು ಹಾಗೂ ದಿನೇಶ್ ಸರಳಾಯ ಸಂಪನ್ಮೂಲ ವ್ಯಕ್ತಿಗಳಾಗಿ  ಭಾಗವಹಿಸಲಿದ್ದಾರೆ.

ಗೋಷ್ಠಿಯ ಜೊತೆಯಲ್ಲಿ ರೈತ ವಿಜ್ಞಾನಿ ಸಂವಾದ ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಸಹಾಯಕ ತೋಟಗಾರಿಕಾ ನಿರ್ದೇಶಕ ಶಿವಪ್ರಕಾಶ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ತಳಿ ಸಂಗ್ರಹ, ಹಲಸು ಖಾದ್ಯಗಳ ತಯಾರಿ ಸ್ಪರ್ಧೆ, ಹಲಸು ಸೊಳೆ ತಿನ್ನುವ ಸ್ಪರ್ಧೆ, ಪ್ರದರ್ಶನ, ಮಾರಾಟ ಮಳಿಗೆಗಳು, ಹಲಸು ಗಿಡಗಳ ಮಾರಾಟ, ಶಾಲಾ ಮಕ್ಕಳಿಗೆ ಹಲಸಿನ ಚಿತ್ರ ಬಿಡಿಸುವ ಸ್ಪರ್ಧೆ ಮುಂತಾದ ಚಟುವಟಿಕೆಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ 40ರಿಂದ 50 ಮಳಿಗೆಗಳು ಭಾಗವಹಿಸಲಿದ್ದು,  ಹಲಸಿನ ಉತ್ಪನ್ನಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಬೇರೆ ಬೇರೆ ಹಲಸಿನ ತಳಿಯ ಗಿಡ ಮಾರಾಟ ನಡೆಯಲಿದೆ. ರಾತ್ರಿ 7 ಗಂಟೆಯ ತನಕವೂ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‍ನ ನಿಯೋಜಿತ ಅಧ್ಯಕ್ಷ ಜಯರಾಮ್ ಎಸ್, ನಿಯೋಜಿತ ಕಾರ್ಯದರ್ಶಿ ಪ್ರಕಾಶ್ ನಾರಾಯಣ್, ಸದಸ್ಯ ಉದಯಶಂಕರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News