ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸಾ ಪದ್ಧತಿ ಮಾಹಿತಿ ಶಿಬಿರ

Update: 2019-06-25 18:01 GMT

ಉಳ್ಳಾಲ: ಬಡ ಜನರ ಆರೋಗ್ಯದ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಆಯುರ್ವೇದ ಮತ್ತು ಹೋಮಿಯೋಪಥಿ ಮನೆ ಮನೆಗೆ  ಮುಟ್ಟುವಂತೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಶ್ಲಾಘನೀಯ ಎಂದು ನರಿಂಗಾನ ಪಂಚಾಯತ್‍ನ ಅಧ್ಯಕ್ಷ ಇಸ್ಮಾಯಿಲ್ ಮಿನಂಕೋಡಿ ಅಭಿಪ್ರಾಯಪಟ್ಟರು.

ಯೆನೆಪೋಯ ಆಯುರ್ವೇದ ಮತ್ತು ಹೋಮಿಯೋಪಥಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆಯುಷ್ ಕ್ಯಾಂಪಸ್, ಕೊಲ್ಲರಕೋಡಿ ನರಿಂಗಾನ ಬಂಟ್ವಾಳ ವತಿಯಿಂದ ಕಾಲೇಜಿನ ಆಯುಷ್ ಕ್ಯಾಂಪಸ್‍ನಲ್ಲಿ ಅಂಗನವಾಡಿ ಟೀಚರ್ಸ್ ಮತ್ತು ಕಛೇರಿ ಕೆಲಸಗಾರರಿಗಾಗಿ ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸಾ ಪದ್ಧತಿ ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. 

ಯೆನೆಪೋಯ ವಿಶ್ವವಿದ್ಯಾನಿಲಯದ ಪ್ರೊ| ವಿ.ಸಿ ಡಾ. ರಘುವೀರ್ ಅಧ್ಯಕ್ಷತೆ ವಹಿಸಿದ್ದಆಸ್ಪತ್ರೆ ವತಿಯಿಂದ ಇಂತಹ ಕಾರ್ಯಕ್ರಮ ಮಾಡಿದಾಗ ಬಡರೋಗಿ ಗಳಿಗೆ ಹಾಗೂ ಜನ ಸಾಮಾನ್ಯರಿಗೆ ಅವರ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಪ್ರಯೋಜನಕಾರಿಯಾಗುತ್ತದೆ ಮತ್ತು ಆಸ್ಪತ್ರೆ ವತಿಯಿಂದ ಸಿಗುವ ಉಚಿತ ಹಾಗೂ ಇತರ ಸೌಲಭ್ಯದ ಬಗ್ಗೆ ವಿವರಿಸಿದರು. ಹಾಗೂ ಕಾರ್ಯಕರ್ತೆಯರ ಬಾಗವಹಿಸುವಿಕೆಗಾಗಿ ಅಭಿನಂದಿಸಿದರು. 

ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದ.ಕ ಇದರ ಸಹಾಯಕ ಉಪ ನಿರ್ದೇಶಕ ಉಸ್ಮಾನ್ ಮಾತನಾಡಿ ಯೆನೆಪೋಯ ಆಯುರ್ವೇದ ಮತ್ತು ಹೋಮಿಯೋಪಥಿ ಮೆಡಿಕಲ್ ಕಾಲೇಜು ಮತ್ತು ಅಸ್ಪತ್ರೆಯು ನಮ್ಮ ಅಂಗನವಾಡಿ ಕಾರ್ಯಕರ್ತೆಯರಿಗೆ ಇಂತಹ ಕಾರ್ಯಕ್ರಮ ಅಗತ್ಯವಾಗಿದೆ .ನಮ್ಮ ಇಲಾಖೆಯು ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿದೆ. ಅದುದರಿಂದ ಇಂತಹ ಕಾರ್ಯಕ್ರಮದಿಂದ ತೂಕ ಕಡಿಮೆ ಮತ್ತು ಇನ್ನಿತರ ಕಾಯಿಲೆಗಳ ಮಕ್ಕಳ ಬೆಳವಣೆಗೆಗೆ ಸಹಾಕಾರ ವಾಗಳಿದೆ ಇನ್ನು ಮುಂದೆಯು ಇಂತಹ ಅರೋಗ್ಯಕರ ಕಾರ್ಯಕ್ರಮ ನಮ್ಮ ಕಾರ್ಯಕರ್ತೆಯರಿಗೆ ಅಗತ್ಯವಿದ್ದು ತಾವುಗಳು ನಡೆಸುವುದಾದರೆ ನಮ್ಮ ಇಲಾಖೆ ವತಿಯಿಂದ ಸಹಕಾರ ನೀಡುವುದೆಂದು ಭರವಸೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು. 

ವೇದಿಕೆಯಲ್ಲಿ ಯೆನೆಪೋಯ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಪ್ರಸನ್ನ ಐತಾಳ್, ಯೆನೆಪೋಯ ಹೋಮಿಯೋಪಥಿ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ವಿವೇಕಾನಂದ ವರ್ಣೆಕರ್ ಉಪಸ್ಥಿತರಿದ್ದರು.

ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ. ಶುಭದ  ಮತ್ತು ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಡಾ. ಡೆಲ್ಸ್ ,ಡಾ. ಇರ್ಫಾನ ರಾಹಿಲ, ಡಾ.ಅರುಣ್ ಮತ್ತು ಡಾ. ಚೈತ್ರ , ಡಾ. ಪ್ರೀಯಾ ಪ್ರದೀಪ್ ಮಾಹಿತಿ ನೀಡಿದರು. 

ಪ್ರಥಮದಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಪ್ರಸನ್ನ ಐತಾಳ್ ಸ್ವಾಗತಿಸಿದರು. ಹೋಮಿಯೋಪಥಿ ವೈದ್ಯಕೀಯ ವಿದ್ಯಾರ್ಥಿಆಸಿಫ್ ಸಯ್ಯದ್  ಕಿರಾಅತ್ ಪಠಿಸಿದರು. ಆಯುರ್ವೇದ ಮೆಡಿಕಲ್ ಕಾಲೇಜು ಡಾ. ಶಿಲ್ಪ.ಕೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ಮುಖ್ಯಸ್ಥ ಅಬ್ದುಲ್ ರಝಾಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News