ಭಿಕ್ಷಾಟನೆ ನಿರತ, ಶಾಲೆಯಿಂದ ಹೊರಗುಳಿದ ಮಕ್ಕಳ ರಕ್ಷಣಾ ಕಾರ್ಯಚರಣೆ

Update: 2019-06-26 16:15 GMT

ಉಡುಪಿ, ಜೂ. 26: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ, ಪೋಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಮಕ್ಕಳ ಸಹಾಯವಾಣಿ, ನಾಗರಿಕ ಸೇವಾ ಸಮಿತಿ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಬಸ್‌ನಿಲ್ದಾಣ, ಉಡುಪಿ ಸಿಟಿ ಬಸ್‌ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ರಾಜಾಂಗಣ ಆಸುಪಾಸು, ಆದಿಉಡುಪಿಯ ಸಂತೆ ಮಾರ್ಕೆಟ್‌ನಲ್ಲಿ ಭಿಕ್ಷಾಟನೆ ಮಾಡದಂತೆ ಅರಿವು ಮೂಡಿಸಲಾಗುತ್ತಿದೆ.

ಬುಧವಾರ ಸಿಟಿ ಬಸ್‌ನಿಲ್ದಾಣದಲ್ಲಿ ಭಿಕ್ಷಾಟನೆ ನಿರತ ಒಬ್ಬ ಬಾಲಕನನ್ನು ಹಾಗೂ ಆದಿಉಡುಪಿಯ ಸಂತೆ ಮಾರ್ಕೆಟ್‌ನಲ್ಲಿ ರಾಯಚೂರು ಮೂಲದ ನಾಲ್ವರು ಶಾಲೆಯಿಂದ ಹೊರಗುಳಿದ ಬಾಲಕರನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಯಾನಂದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಾಗರಾಜ್, ಉಡುಪಿ ನಗರಸಬೆಯ ಆರೋಗ್ಯ ನಿರೀಕ್ಷಕ ಆನಂದ್ ಮತ್ತು ಕರುಣಾಕರ್, ಉಡುಪಿ ಮಹಿಳಾ ಠಾಣೆಯ ಪೋಲಿಸ್ ಉಪನಿರೀಕ್ಷಕಿ ಕಲ್ಪನಾ, ಮಣಿಪಾಲ ಠಾಣೆಯ ಎಎಸ್‌ಐ ಶೈಲೇಶ್ ಹಾಗೂ ಉಡುಪಿ ಡಿಸಿಐಬಿ ಮತ್ತು ಮಹಿಳಾ ಪೋಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಪ್ರಭಾಕರ್ ಆಚಾರ್, ಕಾನೂನು ಪರಿವೀಕ್ಷಣಾಧಿಕಾರಿ, ಯೋಗೀಶ್ ಸಮಾಜಕಾರ್ಯಕರ್ತರಾದ ಗ್ಲೀಶಾ, ಸಂದೇಶ್ ಕೆ, ಸುನಂದ, ನಾಗರಿಕ ಸೇವಾ ಸಮಿತಿಯ ನಿತ್ಯಾನಂದ ಒಳಕಾಡು, ತಾರನಾಥ್ ಮೇಸ್ತ, ಮಕ್ಕಳ ಸಹಾಯ ವಾಣಿಯ ಸಂಯೋಜಕರಾದ ಅರವಿಂದ್, ತ್ರಿವೇಣಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News