ಡಾ.ಎಂ.ರಾವ್ ಮನೋವಿಜ್ಞಾನ ಪುಸ್ತಕಕ್ಕೆ ಕಸಾಪ ದತ್ತಿ ಬಹುಮಾನ

Update: 2019-06-26 16:16 GMT

ಉಡುಪಿ, ಜೂ.26: ಕನ್ನಡ ಸಾಹಿತ್ಯ ಪರಿಷತ್ತು 2018ರಲ್ಲಿ ಪ್ರಕಟವಾದ ವಿವಿಧ ಕೃತಿಗಳಿಗೆ ದತ್ತಿನಿಧಿ ಬಹುಮಾನಗಳನ್ನು ಪ್ರಕಟಿಸಿದ್ದು ಉಡುಪಿಯ ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ ಹಾಗೂ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಅವರ ‘ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ಹೇಗೆ?’ ಎಂಬ ಕೃತಿಗೆ ಡಾ.ಎ.ಎಸ್.ಧರಣೇಂದ್ರಯ್ಯ ಮನೋವಿಜ್ಞಾನ ಪುಸ್ತಕ ದತ್ತಿನಿಧಿ ಬಹುಮಾನವನ್ನು ಘೋಷಿಸಲಾಗಿದೆ.

ಬೆಂಗಳೂರಿನ ನವಕರ್ನಾಟಕ ಪ್ರಕಾಶನವು ಈ ಕೃತಿಯನ್ನು ಪ್ರಕಟಿಸಿದ್ದು, ಡಾ.ರಾವ್ ಅವರು ಬರೆದಿರುವ ಇತರ ಕೆಲವು ಮನೋವಿಜ್ಞಾನ ಸಂಬಂಧಿ ಕೃತಿಗಳು ಈ ಹಿಂದೆಯೂ ಈ ಪುರಸ್ಕಾರಕ್ಕೆ ಪಾತ್ರವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News