ಮಹಿಳೆಯ ಸರ ಅಪಹರಣ
Update: 2019-06-26 22:00 IST
ಉಡುಪಿ, ಜೂ.26: ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಮಹಿಳೆಯೊಬ್ಬರ ಕತ್ತಿನಲ್ಲಿದ ಚಿನ್ನದ ಸರ ಅಪಹರಿಸಿ ಪರಾರಿಯಾಗಿರುವ ಘಟನೆ ಉಡುಪಿ ಆದರ್ಶ ಆಸ್ವತ್ರೆಯ ಎದುರುಗಡೆ ಜೂ. 25ರಂದು ರಾತ್ರಿ 10:30ರ ಸುಮಾರಿಗೆ ನಡೆದಿದೆ.
ಚಿಟ್ಪಾಡಿಯ ಹನುಮಂತ ನಾಯ್ಕ್ ಎಂಬವರ ಮಗಳು ವಿದ್ಯಾ ನಾಯ್ಕ್ (24) ಎಂಬವರು ಆದರ್ಶ ಆಸ್ವತ್ರೆಯ ವೈದ್ಯರನ್ನು ಭೇಟಿ ಮಾಡಲು ಆಸ್ಪತ್ರೆ ಎದುರಿನ ರಸ್ತೆಯನ್ನು ದಾಟುವ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ವಿದ್ಯಾ ನಾಯ್ಕ್ರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದಾರೆ.
ಕಳವಾದ ಏಳು ಗ್ರಾಂ ಚಿನ್ನದ ಮೌಲ್ಯ 19,000ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.