×
Ad

ಚಿತ್ರ ನಿರ್ಮಾಪಕ ಕೃಷ್ಣಪ್ಪ ನಿಧನ

Update: 2019-06-26 22:03 IST

ಉಡುಪಿ, ಜೂ.26: ಕನ್ನಡ ಚಿತ್ರ ನಿರ್ಮಾಪಕ, ಉದ್ಯಮಿ ಮಾಲೂರಿನ ಎಂ.ಆರ್.ಕೃಷ್ಣಪ್ಪ(90)ಮಂಗಳವಾರ ನಸುಕಿನ ಜಾವ ಅಜ್ಜರಕಾಡು ಜಿಲ್ಲಾಸ್ಪತ್ರೆ ಯಲ್ಲಿ ನಿಧನರಾದರು.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕೃಷ್ಣಪ್ಪಅವರನ್ನು ಉಡುಪಿಯ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಕೆಲವು ದಿನಗಳ ಹಿಂದೆ ಅವರು ಆಶ್ರಯ ಪಡೆದಿದ್ದ ಕಟಪಾಡಿಯ ಕಾರುಣ್ಯ ಆಶ್ರಮದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು.

ಮನೆಯವರ ನಿರ್ಲಕ್ಷದಿಂದ ನೆಲೆ ಇಲ್ಲದೆ ಎರಡು ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದ ಇವರನ್ನು ಸಮಾಜ ಸೇವ ಕಾರ್ಯಕರ್ತರು ಗುರುತಿಸಿ ಕಟಪಾಡಿಯ ಆಶ್ರಮಕ್ಕೆ ಸೇರಿಸಿದ್ದರು.

ಎಂ.ಆರ್.ಕೃಷ್ಣಪ್ಪಹಲವು ಕನ್ನಡ ಚಿತ್ರಗಳ ನಿರ್ಮಾಣದಲ್ಲಿ ಪಾಲುದಾರರಾಗಿದ್ದರು. 1977ರಲ್ಲಿ ’ಗೆದ್ದವಳು ನಾನೇ’ ಎಂಬ ಚಿತ್ರವನ್ನು ಅವರು ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News