ಕೊಯಿಲ ಶಾಲೆಗೆ ಜನ ಸೇವಾ ಟ್ರಸ್ಟ್ ನಿಂದ ವಾಹನ ಕೊಡುಗೆ

Update: 2019-06-26 16:36 GMT

ಬಂಟ್ವಾಳ, ಜೂ. 25: ಬಂಟ್ವಾಳ ತಾಲೂಕು ಕೊಯಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾರ್ಯದ ದತ್ತು ಪಡಕೊಂಡಿರುವ ಜನ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲಾ ವಾಹನ ಓಮ್ನಿ ಕಾರಿನ ಹಸ್ತಾಂತರ ಕಾರ್ಯಕ್ರಮ ಶಾಲೆಯಲ್ಲಿ ಜರಗಿತು. 

ಸರಕಾರಿ ಶಾಲೆ ಉಳಿಸಿ ರಾಜ್ಯ ಸಮಿತಿ ಮತ್ತು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಪ್ರಕಾಶ್ ಅಂಚನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಶಾಲೆ ಎಂದರೆ ಸರ್ವ ಧರ್ಮದವರ ದೇಗುಲ. ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವುದರಿಂದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸಹಕಾರಿಯಾಗುವುದು. ಊರವರು ಪ್ರಯತ್ನ ಪಟ್ಟರೆ ಊರ ಸರಕಾರಿ ಶಾಲೆಯನ್ನು ಅಭಿವೃದ್ಧಿಗೊಳಿಸಬಹುದು. ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವುದು ಪುಣ್ಯ ಕಾರ್ಯ ಎಂದು ಹೇಳಿದರು. 

ಜನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪದ್ಮರಾಜ ಬಲ್ಲಾಳ್, ತಾಪಂ ಸದಸ್ಯೆ ಮಂಜುಳಾ ಸದಾನಂದ, ನಿವೃತ್ತ ಮುಖ್ಯ ಶಿಕ್ಷಕಿ ಪಾವನಾದೇವಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ ಕೊಯಿಲ, ಕೊಯಿಲ ಸ.ಪ್ರೌ.ಶಾಲಾ ಮುಖ್ಯ ಶಿಕ್ಷಕ ಸುಧೀರ್ ಜಿ., ಜನ ಸೇವಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಚಂದಪ್ಪ, ಸದಸ್ಯರಾದ ಶಾಂತಾ ನಾಗರಾಜ್ ಭಟ್, ಸದಾನಂದ ಸೀತಾಳ, ಶ್ರೀನಿವಾಸ ಕೊಯಿಲ, ಜಯಲಕ್ಷ್ಮಿ , ರಾಮಚಂದ್ರ ಶೆಟ್ಟಿಗಾರ್, ಶರತ್ ಕೊಯಿಲ, ಲೋಕೇಶ್,  ಗ್ರಾ.ಪಂ.ಸದಸ್ಯೆ ಕುಸುಮಾ, ಮುಖ್ಯಶಿಕ್ಷಕಿ ಮೇಬುಲ್ ಫರ್ನಾಂಡಿಸ್, ಶಿಕ್ಷಕ ವೃಂದ, ಮತ್ತಿತರರು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಕಿ ಪಾಸ್ಕಲ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News