ಪಬ್ಲಿಕ್ ಪರೀಕ್ಷೆ: ಆತೂರು ಬೈಲ್ ಮದ್ರಸದ ನಾಫಿಯಾ ರೇಂಜ್ ನಲ್ಲಿ ಪ್ರಥಮ

Update: 2019-06-26 17:04 GMT
ಆಯಿಷತ್ ನಾಫಿಯಾ - ಫಾತಿಮತ್ ಅಫ್ರಾ

ಆತೂರು: ಸಮಸ್ತ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಏಳು ಮತ್ತು ಐದನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಆತೂರು ರೇಂಜ್ ಗೊಳಪಟ್ಟ ಖಮರುಲ್ ಇಸ್ಲಾಂ ಮದ್ರಸ ಆತೂರುಬೈಲ್ 100 ಶೇಕಡಾ  ಫಲಿತಾಂಶ ಪಡೆದುಕೊಂಡಿದೆ.

ಏಳನೇ ತರಗತಿ ವಿದ್ಯಾರ್ಥಿನಿ ಆಯಿಷತ್ ನಾಫಿಯಾ ಆತೂರು ರೇಂಜ್ ನಲ್ಲಿ  ಡಿಸ್ಟಿಂಕ್ಷನ್ ಪಡೆದು ಪ್ರಥಮ ಹಾಗೂ ಫಾತಿಮತ್ ಅಫ್ರಾ ಉತ್ತಮ ಅಂಕ ಪಡೆದು ರೇಂಜ್ ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಮುಹಮ್ಮದ್ ಮನಾಫ್ (449/500), ರಂಶೀನಾ (449/500) , ಮುನವ್ವರ್ ಹುಸೈನ್ (445/500) ಉತ್ತಮ ಅಂಕಗಳನ್ನು ಪಡೆದಿದ್ದಾರೆ.

ಪರೀಕ್ಷೆಯಲ್ಲಿ ಭಾಗವಹಿಸಿದ ಏಳು ವಿದ್ಯಾರ್ಥಿಗಳಲ್ಲಿ ಐದು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್  ಹಾಗೂ ಎರಡು ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಮದ್ರಸದ ಮುಖ್ಯ ಅಧ್ಯಾಪಕರಾದ ಸಿ.ಎಂ. ಇಬ್ರಾಹಿಂ ಕೌಸರಿ ಮುಂಡೋಳೆ , ಸಹ ಅಧ್ಯಾಪಕರಾದ ಎಸ್ ಬದ್ರುದ್ದೀನ್ ಮುಸ್ಲಿಯಾರ್ ಉತ್ತಮ ಫಲಿತಾಂಶ ಪಡೆಯಲು ಪರಿಶ್ರಮ ಪಟ್ಟಿದ್ದಾರೆಂದು ಮದ್ರಸ ಕಾರ್ಯದರ್ಶಿ ಡಿ.ಎ.ಪುತ್ತುಮೋನು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News