‘ಉದ್ಯೋಗಕ್ಕೆ ಲಂಚ’ ಪಡೆದ ಹಣವನ್ನು ಮರಳಿಸಿದ ಟಿಎಂಸಿ ಮುಖಂಡ

Update: 2019-06-26 17:32 GMT

ಕೋಲ್ಕತಾ, ಜೂ.26: ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಎಂನರೇಗಾ)ಯಡಿ ಉದ್ಯೋಗ ಒದಗಿಸಿಕೊಟ್ಟು, ಬಳಿಕ ಅದಕ್ಕೆ ಕಮಿಷನ್ ರೂಪದಲ್ಲಿ ಪಡೆದ 2.5 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ಟಿಎಂಸಿ ಮುಖಂಡ ಹಿಂದಿರುಗಿಸಿದ ಪ್ರಕರಣ ವರದಿಯಾಗಿದೆ.

ಪಶ್ಚಿಮ ಬಂಗಾಳದ ಸೂರಿ ಜಿಲ್ಲೆಯ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಎಂನರೇಗಾ ಯೋಜನೆಯಡಿ ಉದ್ಯೋಗ ಒದಗಿಸಿಕೊಟ್ಟ ಟಿಎಂಸಿ ಬೂತ್‌ಮಟ್ಟದ ಅಧ್ಯಕ್ಷ ತ್ರಿಲೋಚನ ಮುಖ್ಯೋಪಾಧ್ಯಾಯ ಎಂಬಾತ 141 ಮಂದಿಯಿಂದ ಒಟ್ಟು 2.5 ಲಕ್ಷ ರೂ. ಕಮಿಷನ್ ಪಡೆದಿದ್ದ. ಇದನ್ನು ವಿರೋಧಿಸಿ ಸ್ಥಳೀಯರು ಕಳೆದ ಎರಡು ದಿನದಿಂದ ಪ್ರತಿಭಟನೆ ನಡೆಸಿದ್ದರು.

ಬುಧವಾರ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿರುವ ತ್ರಿಲೋಚನ, ಜನರಿಂದ ಪಡೆದ ಹಣವನ್ನು ಮರಳಿಸುವುದಾಗಿ ಹೇಳಿದ್ದಾನೆ. ಈ ಘಟನೆಯನ್ನು ಖಂಡಿಸಿರುವ ಸ್ಥಳೀಯ ಬಿಜೆಪಿ ಘಟಕ, ಇದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಹಿರಿಯ ಟಿಎಂಸಿ ಸಚಿವರು, ಶಾಸಕರು ಕೂಡಾ ಜನರಿಂದ ಪಡೆದಿರುವ ಹಣವನ್ನು ಮರಳಿಸಬೇಕಾಗಿದೆ ಎಂದು ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News