×
Ad

ಭಾರತ ನ್ಯಾಯೋಚಿತ ವ್ಯಾಪಾರ ನಡೆಸಬೇಕು: ಅಮೆರಿಕ

Update: 2019-06-26 23:37 IST

ವಾಶಿಂಗ್ಟನ್, ಜೂ. 26: ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರಕ್ಕೆ ತಡೆಯಾಗುವ ಅಂಶಗಳನ್ನು ಪ್ರಧಾನಿ ನರೇಂದ್ರ ಮೋದಿ ನಿವಾರಿಸಬೇಕು ಹಾಗೂ ‘ನ್ಯಾಯೋಚಿತ ಮತ್ತು ಪರಸ್ಪರ’ ವ್ಯಾಪಾರವನ್ನು ಸ್ವಾಗತಿಸಬೇಕು ಎಂದು ಅಮೆರಿಕ ಮಂಗಳವಾರ ಹೇಳಿದೆ.

ಭಾರತದ ನೂತನ ಸರಕಾರದೊಂದಿಗೆ ಮಾತುಕತೆ ನಡೆಸಲು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೊಸದಿಲ್ಲಿ ತಲುಪಿರುವಂತೆಯೇ, ಅಮೆರಿಕ ಈ ಮಾತುಗಳನ್ನು ಹೇಳಿದೆ.

‘‘ಭಾರತವು ವ್ಯಾಪಾರ ತಡೆಗಳನ್ನು ತೆಗೆದುಹಾಕಿದರೆ ಹಾಗೂ ನ್ಯಾಯೋಚಿತ ಮತ್ತು ಪರಸ್ಪರ ವ್ಯಾಪಾರವನ್ನು ಅಪ್ಪಿಕೊಂಡರೆ, ನಮ್ಮ ವ್ಯಾಪಾರ ಸಂಬಂಧವನ್ನು ಬೆಳೆಸಲು ಹಾಗೂ ಉನ್ನತ ಗುಣಮಟ್ಟದ ಉದ್ಯೋಗಗಳನ್ನು ಹೊಂದಲು ಅಗಾಧ ಸಾಧ್ಯತೆಗಳಿವೆ’’ ಎಂದು ಅಮೆರಿಕದ ವಿದೇಶ ಸಚಿವಾಲಯವು ಮಂಗಳವಾರ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.

‘‘ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಅಮೆರಿಕದ ಕಂಪೆನಿಗಳು, ಅಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ಭಾರತೀಯ ಕಂಪೆನಿಗಳು ಹೊಂದಿರುವಷ್ಟೇ ಪ್ರಮಾಣದ ಸಮಾನ ಅವಕಾಶಗಳನ್ನು ಹೊಂದುವುದನ್ನು ಖಚಿತಪಡಿಸಲು ಟ್ರಂಪ್ ಸರಕಾರ ಶ್ರಮಿಸುತ್ತಿದೆ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News