ಅಮೆರಿಕ, ಉತ್ತರ ಕೊರಿಯ ನಡುವೆ ತೆರೆಮರೆ ಮಾತುಕತೆ: ದಕ್ಷಿಣ ಕೊರಿಯ ಅಧ್ಯಕ್ಷ

Update: 2019-06-26 18:16 GMT

ಸಿಯೋಲ್, ಜೂ. 26: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ಮೂರನೇ ಶೃಂಗ ಸಮ್ಮೇಳನದ ಸಾಧ್ಯತೆಯ ಬಗ್ಗೆ ಪರಿಶೀಲಿಸಲು ಅಮೆರಿಕವು ಉತ್ತರ ಕೊರಿಯದೊಂದಿಗೆ ತೆರೆಮರೆಯ ಮಾತುಕತೆಗಳಲ್ಲಿ ತೊಡಗಿದೆ ಎಂದು ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್ ಬುಧವಾರ ಹೇಳಿದ್ದಾರೆ.

ಉಭಯ ನಾಯಕರ ನಡುವೆ ವಿಯೆಟ್ನಾಮ್ ರಾಜಧಾನಿ ಹನೋಯಿಯಲ್ಲಿ ಫೆಬ್ರವರಿ ಕೊನೆಯಲ್ಲಿ ನಡೆದ ಎರಡನೇ ಶೃಂಗ ಸಮ್ಮೇಳನ ಯಾವುದೇ ಒಪ್ಪಂದವಿಲ್ಲದೆ ಅರ್ಧದಲ್ಲೇ ಮುಕ್ತಾಯಗೊಂಡಿರುವುದನ್ನು ಸ್ಮರಿಸಬಹುದಾಗಿದೆ.

‘‘ಮೂರನೇ ಶೃಂಗ ಸಮ್ಮೇಳನದ ಸಾಧ್ಯತೆಯ ಬಗ್ಗೆ ಪರಿಶೀಲಿಸಲು ಉಭಯ ದೇಶಗಳು ಮಾತುಕತೆಯಲ್ಲಿ ತೊಡಗಿವೆ’’ ಎಂದು ಮೂನ್ ಜೇ ಇನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News