ಮಂಗಳೂರು: ಜೂ. 29ರಂದು ಹಜ್ ಯಾತ್ರಾರ್ಥಿಗಳಿಗೆ ಚುಚ್ಚುಮದ್ದು
Update: 2019-06-27 19:45 IST
ಮಂಗಳೂರು, ಜೂ. 27: ಪ್ರಸಕ್ತ 2019ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವವರು ಜೂ. 29ರಂದು ಬೆಳಗ್ಗೆ 10ಕ್ಕೆ ಮಂಗಳೂರಿನ ಕೊಡಿಯಲ್ ಬೈಲ್‌ನಲ್ಲಿರುವ ಯೆನೆಪೋಯ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಪಡೆಯಬಹುದಾಗಿದೆ.
ಹಜ್ ಸಮಿತಿಯ ಮೂಲಕ ಹಜ್ ಯಾತ್ರೆ ಕೈಗೊಳ್ಳುವವರು ಮಾತ್ರ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ರಾಜ್ಯ ಹಜ್ ನಿರ್ವಾಹಣಾ ಸಮಿತಿಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.