ಪರಿಸರ ಉಳಿಸಿ, ಬೆಳೆಸುವ ಕೆಲಸವಾಗಲಿ: ದಿನಕರ ಬಾಬು

Update: 2019-06-27 16:37 GMT

ಉಡುಪಿ, ಜೂ.27: ನಾಡಪ್ರಭು ಕೆಂಪೇಗೌಡರು ಕಟ್ಟಿಸಿರುವ ಕೆರೆ ಕಟ್ಟೆಗಳು, ಬೆಳೆಸಿದ ಮರಗಳು ಇಂದಿಗೂ ಮಾದರಿಯಾಗಿವೆ. ಅವರು ನಗರ ನಿರ್ಮಿಸಲು ಹಾಕಿಕೊಂಡಿದ್ದ ಯೋಜನೆಗಳನ್ನು ಅಳವಡಿಸಿ ಇಂದಿನ ದಿನಗಳಲ್ಲಿ ಅನುಪ್ಠಾನ ಗೊಳಿಸುವ ಅಗತ್ಯವಿದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಹೇಳಿದ್ದಾರೆ.

ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಉಡುಪಿ ಜಿಲ್ಲಾ ಒಕ್ಕಲಿಗ(ಗೌಡ)ರ ಸೇವಾ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ನಾಡ ಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೆಂಪೇಗೌಡ ನಗರ ನಿರ್ಮಾಣ ಯೋಜನೆ ಬೆಂಗಳೂರಿಗೆ ಮಾತ್ರ ಸೀಮಿತವಾ ಗಿರದೆ ಜಿಲ್ಲೆಗೂ ಬರಲಿ. ಜಿಲ್ಲೆಯಲ್ಲಿ ಈ ಬಾರಿ ನೀರಿನ ತೀವ್ರ ಸಮಸ್ಯೆ ಕಂಡು ಬಂದಿದೆ. ಸರಕಾರದ ಸಹಕಾರದೊಂದಿಗೆ ವಿವಿಧ ಸಂಘ ಸಂಸ್ಥೆಗಳು ಜೊತೆಗೂಡಿ ಕೆರೆ-ನದಿಗಳ ಹೂಳೆತ್ತುವ ಕಾರ್ಯ ಮಾಡಿ ಪರಿಸರ ಉಳಿಸುವ ಕೆಲಸ ವಾಗಬೇಕು ಎಂದರು.

ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್‌ರಾವ್, ಉಡುಪಿ ಜಿಲ್ಲಾ ಒಕ್ಕಲಿಗ(ಗೌಡ)ರ ಸೇವಾ ಸಂಘದ ಅಧ್ಯಕ್ಷ ಸಿದ್ಧರಾಜು ಗೌಡ ಅವರು ಮಾತನಾಡಿದರು.

ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕೆಂಪೇಗೌಡರು ನಗರ ನಿರ್ಮಿಸ ಬೇಕೆಂದು ನಿರ್ಣಯಿಸಿದಾಗ ಅದಕ್ಕೊಂದು ನೀತಿ, ಯೋಜನೆ ಇತ್ತು. ಆದರೆ ನಗರಗಳು ಮಹಾನಗರಗಳಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಯಾವುದಕ್ಕೂ ಮಹತ್ವ ನೀಡಲಾಗುತ್ತಿಲ್ಲ. ನಗರದಲ್ಲಿ ವಾಸಿಸುವ ಜನರ ಅವಶ್ಯಕತೆಗಳನ್ನು ಅರಿತು ಕೋಟೆ, ಕೆರೆಗಳೊಂದಿಗೆ ಪೇಟೆ ನಿರ್ಮಾಣಕ್ಕೂ ಮಹತ್ವ ನೀಡಿದ್ದರು. ಎಲ್ಲಾ ವರ್ಗದ ಜನರಿಗೂ ಬದುಕಲು ಅನುಕೂಲ ವಾಗುವಂತೆ ವಿವಿಧತೆಯಲ್ಲಿ ಏಕತೆ ಕಂಡುಕೊಳ್ಳುವಂತೆ ನಗರ ನಿರ್ಮಿಸಿದ್ದರು. ನೀರಿನ ಮಹತ್ವ ಅರಿತ ಅವರು ಎಲ್ಲರಿಗೂ ಅನುಕೂಲವಾಗುವಂತೆ ನಗರದ ಎಲ್ಲೆಡೆಯೂ ಕೆರೆಗಳ ನಿರ್ಮಾಣ ಮಾಡಿದ್ದರು ಎಂದರು.

ನೀರಿನ ಮಹತ್ವ ಅರಿಯದೇ ನೀರಿನ ಮೂಲಗಳನ್ನು ಒತ್ತುವರಿ ಮಾಡಿ ಮಹಾನಗರಗಳನ್ನು ನಿರ್ಮಿಸಲು ಮುಂದಾಗುವ ಎಲ್ಲರೂ ಕೆಂಪೇಗೌಡರ ಆದರ್ಶಗಳನ್ನು ಅರ್ಥೈಸಿಕೊಳ್ಳಬೇಕು. ರಸ್ತೆ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯುತ್ತಿರುವ ಇಂದಿನ ದಿನಗಳಲ್ಲಿ ರಸ್ತೆ ಅಕ್ಕ ಪಕ್ಕದಲ್ಲಿ ದಾರಿ ಹೋಕರಿಗೆ ದಣಿವು ನಿವಾರಿಸಿಕೊಳ್ಳಲು ಅನುಕೂಲವಾಗುವಂತೆ ಅನೇಕ ಮರಗಳನ್ನು ಬೆಳೆಸಿದ್ದರು. ಇಂದು ನಾವು ಅದೇ ಮಾದರಿಯಲ್ಲಿ ಹಸಿರು ವನಗಳನ್ನು ಮಾಡುವ ಮೂಲಕ ಅವರಿಗೆ ಗೌರವ ಸೂಚಿಸಬೇಕು ಎಂದು ಡಾ.ನಿಕೇತನ ಸಲಹೆ ನೀಡಿದರು.

ನೀರಿನ ಮಹತ್ವ ಅರಿಯದೇ ನೀರಿನ ಮೂಲಗಳನ್ನು ಒತ್ತುವರಿ ಮಾಡಿ ಮಹಾನಗರಗಳನ್ನು ನಿರ್ಮಿಸಲು ಮುಂದಾಗುವ ಎಲ್ಲರೂ ಕೆಂಪೇಗೌಡರ ಆದರ್ಶಗಳನ್ನು ಅರ್ಥೈಸಿಕೊಳ್ಳಬೇಕು. ರಸ್ತೆ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯುತ್ತಿರುವ ಇಂದಿನ ದಿನಗಳಲ್ಲಿ ರಸ್ತೆ ಅಕ್ಕ ಪಕ್ಕದಲ್ಲಿ ದಾರಿ ಹೋಕರಿಗೆ ದಣಿವು ನಿವಾರಿಸಿಕೊಳ್ಳಲು ಅನುಕೂಲವಾಗುವಂತೆ ಅನೇಕ ಮರಗಳನ್ನು ಬೆಳೆಸಿದ್ದರು. ಇಂದು ನಾವು ಅದೇ ಮಾದರಿಯಲ್ಲಿ ಹಸಿರು ವನಗಳನ್ನು ಮಾಡುವ ಮೂಲಕ ಅವರಿಗೆ ಗೌರವ ಸೂಚಿಸಬೇಕು ಎಂದು ಡಾ.ನಿಕೇತನ ಸಲಹೆ ನೀಡಿದರು. ಇನ್ಸ್‌ಪೆಕ್ಟರ್ ಸಂಪತ್‌ಕುಮಾರ್, ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯಾದವ್‌ಕರ್ಕೇರ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್ ಸ್ವಾಗತಿಸಿದರು.

ಇನ್ಸ್‌ಪೆಕ್ಟರ್ ಸಂಪತ್‌ಕುಮಾರ್, ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯಾದವ್‌ಕರ್ಕೇರ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News